ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಸೋಲು

ನವದೆಹಲಿ, ಮಾರ್ಚ್ 12 (ಪಿಟಿಐ, ಯುಎನ್ಐ)– ಬಾಲ್ಕೊ ಷೇರು ವಿಕ್ರಯ ಕುರಿತಂತೆ ರಾಷ್ಟ್ರಪತಿ ಭಾಷಣಕ್ಕೆ ತಿದ್ದುಪಡಿ ಮಾಡುವಂತೆ ವಿರೋಧ ಪಕ್ಷಗಳು ಮಂಡಿಸಿದ ನಿರ್ಣಯ 103 ಮತ್ತು 64 ಮತಗಳಿಂದ ರಾಜ್ಯಸಭೆಯಲ್ಲಿ ಇಂದು ಅಂಗೀಕಾರವಾದ್ದರಿಂದ ಕೇಂದ್ರ ಸರ್ಕಾರ ಮುಜುಗರ ಎದುರಿಸಬೇಕಾಯಿತು.

ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನೆ ಅರ್ಪಿಸುವ ನಿರ್ಣಯ ಕುರಿತಂತೆ ನಡೆದ ಚರ್ಚೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರ ನೀಡಿದರು. ತಕ್ಷಣವೆ ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿ ಅವರು ಬಾಲ್ಕೊ ಷೇರು ವಿಕ್ರಯ ಕುರಿತಂತೆ ರಾಷ್ಟ್ರಪತಿ ಅವರ ಭಾಷಣಕ್ಕೆ ತಿದ್ದುಪಡಿ ಮಂಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಲಾವಕಾಶ ಕೋರಿ ಹೈಕೋರ್ಟ್ಗೆ ಸರ್ಕಾರದ ಅರ್ಜಿ

ಬೆಂಗಳೂರು, ಮಾರ್ಚ್ 12– ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇನ್ನಷ್ಟು ಕಾಲಾವಕಾಶ ಕೇಳಿ ಕರ್ನಾಟಕ ಸರ್ಕಾರ ಸೋಮವಾರ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು.

ಹೈಕೋರ್ಟ್ ಈಗಾಗಲೇ ಆದೇಶಿಸಿರುವಂತೆ ಏಪ್ರಿಲ್ನಲ್ಲಿಯೇ ಚುನಾವಣೆ ನಡೆಸಬೇಕೆಂದರೆ ಅದೇ ಅವಧಿಯಲ್ಲಿ ವಿವಿಧ ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಶಾಲಾ ಕೊಠಡಿಗಳ ಮತ್ತು ಶಿಕ್ಷಕರ (ಚುನಾವಣೆ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲು) ಕೊರತೆ ಉದ್ಭವಿಸುತ್ತದೆ ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.