ನವದೆಹಲಿ, ಮಾರ್ಚ್ 20– ರಕ್ಷಣಾ ಅವ್ಯವಹಾರದಲ್ಲಿ ತಮ್ಮ ಸರ್ಕಾರ ಯಾವುದೇ ಪ್ರಮಾದ ಎಸಗಿಲ್ಲ ಎಂದು ಪ್ರಧಾನಿ ವಾಜಪೇಯಿ ಅವರು ಇಂದು ಬಲವಾಗಿ ಸಮರ್ಥಿಸಿಕೊಂಡರು. ಇಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಹಗರಣದಲ್ಲಿ ಭಾಗಿಯಾಗಿರುವವರು ಎನ್ನಲಾದ ಅಪರಾಧಿಗಳು ಯಾವುದೇ ಸ್ಥಾನಮಾನ ಹೊಂದಿರಲಿ, ಅವರನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಭ್ರಷ್ಟಾಚಾರ ವಿಷಯ ಪ್ರಸ್ತಾಪಿಸುತ್ತಿರುವವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ವಾಜಪೇಯಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿದ್ಯಾರ್ಥಿನಿ ಸಾವು: ಮಂಡ್ಯ ಪ್ರಕ್ಷುಬ್ಧ

ಮಂಡ್ಯ, ಮಾರ್ಚ್ 20– ನಾಪತ್ತೆಯಾಗಿದ್ದ ಶಾಲಾ ಬಾಲಕಿಯೊಬ್ಬಳ ಶವ ಇಂದು ಇಲ್ಲಿನ ಪೊಲೀಸ್ ಕಾಲೋನಿ ಬಾವಿಯಲ್ಲಿ ಸಿಕ್ಕಿದ್ದು, ಈಕೆಯನ್ನು ಕೆಲ ಹುಡುಗರು ಅಪಹರಿಸಿ, ಅತ್ಯಾಚಾರ ಮಾಡಿ, ಕೊಲೆಗೈದ ಶಂಕೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆದ ಕಾರಣ ನಗರದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿ, ಕಲ್ಲು ತೂರಾಟ, ಬೆಂಕಿ, ಧರಣಿ, ಮೆರವಣಿಗೆ, ಅಂಗಡಿ ಬಂದ್, ಲಾಠಿ ಪ್ರಹಾರ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.