ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 22.2.1971

Last Updated 21 ಫೆಬ್ರುವರಿ 2021, 18:06 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಂದಕ್ಕೆ ಹಾಕುವುದಿಲ್ಲ: ಇಂದಿರಾ

ಬಿಹಾರ್‌ ಷರೀಫ್‌, ಫೆ. 21– ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಅಲ್ಲಿ ಲೋಕಸಭಾ ಚುನಾವಣೆಯನ್ನು ಮುಂದಕ್ಕೆ ಹಾಕುವುದಿಲ್ಲ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಸ್ಪಷ್ಟಪಡಿಸಿದರು.

ಮುಯ್ಯಿಗೆ ಮುಯ್ಯಿ

ಮದ್ರಾಸ್‌, ಫೆ. 21– ಮದ್ರಾಸಿನಲ್ಲಿ ಮಾಜಿ ಅರಸರ ರಾಜಧನ ಕುರಿತು ಡಿ.ಎಂ.ಕೆ ಮತ್ತು ಸಂಸ್ಥಾ ಕಾಂಗ್ರೆಸ್ಸಿನ ನಡುವೆ ಭಿತ್ತಿಪತ್ರ ಸಮರ ನಡೆದಿದೆ.

ಸಂಸ್ಥಾ ಕಾಂಗ್ರೆಸ್‌ ನಾಯಕ ಕಾಮರಾಜ್‌ ಅವರು ಮಹಾರಾಜ ಕೂತಿರುವ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವ ಭಿತ್ತಿಪತ್ರವೊಂದನ್ನು ಡಿ.ಎಂ.ಕೆ ಮೊದಲು ಬಿಡುಗಡೆ ಮಾಡಿತ್ತು.

ಡಿ.ಎಂ.ಕೆ ಸಂಸತ್ ಸದಸ್ಯನೊಬ್ಬ ರಾಜನ ಮುಂದೆ ಕೈಕಟ್ಟಿ ನಿಂತಿರುವುದನ್ನು ಸಂಸ್ಥಾ ಕಾಂಗ್ರೆಸ್ಸಿನ ಭಿತ್ತಿಪತ್ರಗಳಲ್ಲಿ ಚಿತ್ರಿಸಲಾಗಿದೆ. ಈ ಚಿತ್ರದ ಕೆಳಗೆ ‘ಓ ರಾಜ, ನಾನು ನಿನ್ನ ಆಜ್ಞಾಪಾಲಕ’ ಎಂದು ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT