ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮ

ಬೆಂಗಳೂರು, ಜೂ. 1– ಸಂಸ್ಥಾನದ ಎಲ್ಲಾ ಹೈಸ್ಕೂಲುಗಳಲ್ಲೂ ಕನ್ನಡ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರುವ ಪ್ರಶ್ನೆಯನ್ನು ಪರಿಶೀಲಿಸಿ ಸಲಹೆ ಮಾಡಲು ಸರ್ಕಾರ ಶೀಘ್ರದಲ್ಲೆ ತಜ್ಞರ ಸಮಿತಿಯೊಂದನ್ನು ನೇಮಿಸುವುದಾಗಿ ಶಿಕ್ಷಣ ಸಚಿವ ಚೆನ್ನಿಗರಾಮಯ್ಯನವರು ಇಂದು ಶಾಸನ ಸಭೆಯಲ್ಲಿ ತಿಳಿಸಿದರು.
ವಿ. ವೆಂಕಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಪ್ರಶ್ನೋತ್ತರಗಳಾದ ನಂತರ ಖಾಸಗಿ ನಿರ್ಣಯಗಳ ಮೇಲೆ ಚರ್ಚೆ ನಡೆಯಿತು.

ಸರಿಯಾದ ಕಟ್ಟಡ, ತೋಟ ಮತ್ತು ಆಟಗಳಿಗೆ ಸಾಕಷ್ಟು ಸ್ಥಳಾವಕಾಶ, ನುರಿತ ಶಿಕ್ಷಕವರ್ಗ, ಇತರ ಶಿಕ್ಷಣ ಸಾಧನಗಳು, ಸರಿಯಾದ ಪರಿಶೀಲನೆ ಈ ಏರ್ಪಾಡುಗಳಿಂದ ಸಂಸ್ಥಾನದ ಪ್ರಾಥಮಿಕ ಶಾಲೆಗಳ ಸ್ಥಿತಿಯನ್ನು ಉತ್ತಮಪಡಿಸಲು ತಕ್ಕ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿರ್ಣಯವನ್ನು ಟಿ. ಮಾದಯ್ಯ ಗೌಡ ಅವರು ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.