ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 6ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.

1976ರ ಮೇ 6ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಕಾರ್ಟೂನ್ ಪ್ರಕಟಗೊಂಡಿದೆ. ‘ತಿಂಡಿ ತೂಕದಲ್ಲಿ ವ್ಯತ್ಯಾಸ ಆಗಿದ್ರೆ ಇಲ್ಲಿ ನಿಲ್ಲಿ ಸಾರ್, ತಿಳೀತದೆ..!’ ಎಂಬ ಸಂಭಾಷಣೆ ಇದೆ.

ರಾಜ್ಯದ ಮೊದಲ ಅನಲಾಗ್ ಟೆರೆಸ್ಟ್ರಿಯಲ್ ಟ್ರಾನ್ಸ್ಮಿಟರ್ ಅನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗಿತ್ತು. ಈ ಕೇಂದ್ರದ ವಿಶೇಷವೆಂದರೆ, ಸಾಕ್ಷರತೆ, ಆರೋಗ್ಯ, ಕೃಷಿ, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಪ್ರಸಾರ ಮಾಡಲಾಗುತ್ತಿತ್ತು.

ಭಾರತದ ಪ್ರಪ್ರಥಮ ‘ತೂಗಾಡುವ ಗೈಡರ್’ ಅನ್ನು ಚಂದ್ರನ್ ಎಂಬುವವರು ತಯಾರಿಸಿದ್ದರು. ಇದರ ಪರೀಕ್ಷೆಯನ್ನು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಗುಡ್ಡದಿಂದ ಕೆಳಕ್ಕೆ ತೇಲಿಕೊಂಡು ಇಳಿಯುವ ಮೂಲಕ ಮಾಡಲಾಯಿತು. ಈ ಮೂಲಕ ಚಂದ್ರನ್ ಗೈಡರ್ನ ಪ್ರಥಮ ಚಾಲಕರಾದರು.

ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ₹6 ಲಕ್ಷ ವೆಚ್ಚದಲ್ಲಿ ಮೇಲುಕೋಟೆ ಸಮೀಪ ತೋಳ ರಕ್ಷಣೆ ಧಾಮದ ಸ್ಥಾಪನೆಗೆ ಕೇಂದ್ರ ಒಪ್ಪಿ ಅನುಮೋದಿಸಿತ್ತು. ಇಂದಿಗೂ ಈ ಧಾಮವಿದ್ದು, 6,857.37 ಹೆಕ್ಟೇರ್ಗಳಲ್ಲಿ ಹರಡಿಕೊಂಡಿದೆ.

ಭಾರತೀಯ ರೈಲ್ವೆಯ ಐತಿಹಾಸಿಕ ಎಂಜಿನ್ಗಳ ಭಾವಚಿತ್ರವಿರುವ 4 ಬಗೆಯ ಅಂಚೆಚೀಟಿಗಳನ್ನು ಅಂಚೆ ಮತ್ತು ತಂತಿ ಇಲಾಖೆ ಬಿಡುಗಡೆ ಮಾಡಿತ್ತು. ಇವುಗಳ ಬೆಲೆ 25 ಪೈಸೆ, 59 ಪೈಸೆ, 100 ಪೈಸೆ ಹಾಗೂ 200 ಪೈಸೆ ಇರುವುದು ವಿಶೇಷ.

70 ರ ದಶಕದಲ್ಲಿ ಮಿದುಳು, ಪಿತ್ತ ಜನಕಾಂಗ ಹಾಗೂ ದೇಹದ ಇತರ ಭಾಗಗಳನ್ನು ಪರೀಕ್ಷಿಸಲು ಉಪಯೋಗಿಸುತ್ತಿದ್ದ ಸಾಧನವಿದು. ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವ ಸಾಮರ್ಥ್ಯವು ಈ ಸಾಧನಕ್ಕಿತ್ತು.

ಸರ್ಕಾರಿ ನೌಕರರ ಸೇವಾ ವ್ಯವಸ್ಥೆಯಲ್ಲಿ ಉದ್ಭವಿಸುವ ತಕರಾರುಗಳನ್ನು ನ್ಯಾಯಾಲಯಗಳಿಗೆ ಒಯ್ಯುವ ಅವಕಾಶವಿದ್ದು, ಇದರಿಂದ ಉದ್ಭವಿಸುವ ಸಮಸ್ಯೆಗಳ ಕುರಿತು ‘ಪಂಚಾಯಿತಿಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿ ಪತ್ರಿಕೆಯು 1976ರ ಮೇ 6ರಂದು ಸಂಪಾದಕೀಯ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.