25 ವರ್ಷಗಳ ಹಿಂದೆ; ಬುಧವಾರ, 18–4–2001

ಬೆಂಗಳೂರು, ಏ. 17– ಚಲನಚಿತ್ರ ಮಾಧ್ಯಮದಲ್ಲಿನ ಕೊಡುಗೆಗಾಗಿ ಪ್ರತಿವರ್ಷ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಕೊಡುತ್ತಿದ್ದ ಸರ್ಕಾರ ಇದೀಗ ಕಿರುತೆರೆಯಲ್ಲಿ ಪ್ರದರ್ಶಗೊಳ್ಳುವ ಅತ್ಯುತ್ತಮ ಧಾರಾವಾಹಿ ಮತ್ತು ಸಾಕ್ಷ್ಯಚಿತ್ರಗಳಿಗೂ ಪ್ರಶಸ್ತಿ ಕೊಡಲು ನಿರ್ಧರಿಸಿದ್ದು, 1999–2000ನೇ ಸಾಲಿನ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿಯು ಟಿ.ಎನ್. ಸೀತಾರಾಂ ನಿರ್ದೇಶನದ ‘ಮಾಯಾಮೃಗ’ಕ್ಕೆ ಸಂದಿದೆ.

ಭೂಮಿಕಾ ಸಂಸ್ಥೆ ನಿರ್ಮಿಸಿದ ಈ ಧಾರಾವಾಹಿಗೆ 25,000 ರೂಪಾಯಿಗಳ ಬಹುಮಾನ ದೊರೆಯಲಿದ್ದು, ಅದೇ ಸಾಲಿನಲ್ಲಿ ದೂರದರ್ಶನ ಕೇಂದ್ರ ನಿರ್ಮಿಸಿ ಉಳ್ಳಾಲಿ ಸುಲೋಚನಾ ಮತ್ತು ರಘು ಅವರ ನಿರ್ದೇಶನದಲ್ಲಿ ಪ್ರಸಾರಗೊಂಡ ‘ದೀಪಾವಳಿ ದೀಪೋತ್ಸವ’ ಎಂಬ ಸಾಕ್ಷ್ಯಚಿತ್ರಕ್ಕೆ 15,000 ರೂಪಾಯಿಗಳ ಬಹುಮಾನ ಪ್ರಕಟಿಸಲಾಗಿದೆ.

ಬೀದರ್ನಲ್ಲಿ ಲಾಕಪ್ ಸಾವು: ಎಸ್ಐ ಸೇರಿ ಮೂವರ ಸಸ್ಪೆಂಡ್

ಬೀದರ್, ಏ. 17– ಪೊಲೀಸ್ ಕಸ್ಟಡಿಯಲ್ಲಿದ್ದ ಆಟೊ ಚಾಲಕ ಮಾರುತಿ ಕೋಳಿ (25) ಇಂದು ಬೆಳಗಿನ ಜಾವ ಇಲ್ಲಿಯ ಗಾಂಧಿ ಗಂಜ್ ಠಾಣೆಯ ಲಾಕಪ್ನಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಠಾಣೆಯ ಎಸ್ಐ ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಲಾಗಿದೆಯಲ್ಲದೆ ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.

ಇಂದು ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ಯುವಕನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.