25 ವರ್ಷಗಳ ಹಿಂದೆ; ಮಂಗಳವಾರ, 17–4–2001

ಬೆಂಗಳೂರು, ಏ. 16– ‘ಕಾಂಗ್ರೆಸ್ ಪಕ್ಷದ ಒಳಗೇ ಜೇಬುಗಳ್ಳರಿದ್ದಾರೆ. ಕಾರ್ಯಕರ್ತರು ಎಚ್ಚರಿಕೆಯಿಂದ ಇರಿ’

–ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ಪಕ್ಷದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಅಧ್ಯಕ್ಷ ಪದವಿಯಿಂದ ಇತ್ತೀಚೆಗಷ್ಟೇ ನಿರ್ಗಮಿಸಿದ ವಿ.ಎಸ್. ಕೌಜಲಗಿ ಅವರು.

ಕೆಪಿಸಿಸಿ ಹೊಸ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರಿಗೆ ಇಂದು ಅಧಿಕಾರ ಹಸ್ತಾಂತರಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಈ ಕರೆ ನೀಡಿದರು.

ಕಾಂಗ್ರೆಸ್ನಿಂದ ದೆಹಲಿಯಲ್ಲಿ ಏರ್ಪಡಿಸಿದ್ದ ರೈತರ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ತಮ್ಮ ಜೇಬಿಗೆ ಕತ್ತರಿ ಬಿದ್ದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಪಕ್ಷದ ಒಳಗೇ ಜೇಬುಗಳ್ಳರಿದ್ದಾರೆ. ಹೊರಗಿಲ್ಲ ಎಂದರು.

ಸಂಸತ್ತಿನ ಸುಗಮ ಕಲಾಪಕ್ಕೆ ಸರ್ವಪಕ್ಷಗಳ ಒಪ್ಪಿಗೆ

ನವದೆಹಲಿ, ಏ. 16 (ಯುಎನ್ಐ)– ಸಂಸತ್ತಿನ ಕಲಾಪಗಳಿಗೆ ನಾಳೆಯಿಂದ ಅಡೆತಡೆ ಉಂಟು ಮಾಡದಿರಲು ಎಲ್ಲ ಪಕ್ಷಗಳು ಇಂದು ಒಪ್ಪಿಕೊಂಡಿವೆ.

ಮಾರ್ಚ್ ತಿಂಗಳಲ್ಲಿ 10 ದಿನಗಳವರೆಗೆ ಸಂಸತ್ತಿನ ಎರಡೂ ಕಲಾಪಗಳು ಸ್ಥಗಿತಗೊಳ್ಳಲು ಕಾರಣವಾಗಿದ್ದ ತೆಹಲ್ಕಾ ವಿವಾದದ ಬಿಕ್ಕಟ್ಟನ್ನು ನಿವಾರಿಸಲು ಲೋಕಸಭಾಧ್ಯಕ್ಷ ಜೆ.ಎಂ.ಸಿ. ಬಾಲಯೋಗಿ ಅವರು, ಇಂದು ಇಲ್ಲಿ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.