ಆಂಧ್ರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ

ಬೆಂಗಳೂರು, ಮೇ 17– ಕೃಷ್ಣಾ ನದಿ ನೀರಿನ ಹಂಚಿಕೆ ಬಗ್ಗೆ ಬಚಾವತ್ ನ್ಯಾಯಮಂಡಳಿಯ ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್
ನೀಡಿರುವ ಆದೇಶವನ್ನು ಆಂಧ್ರಪ್ರದೇಶ ಸರ್ಕಾರ ಉಲ್ಲಂಘಿಸಿರುವುದರ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಇಲ್ಲಿ ಇಂದು ನಡೆದ ಸರ್ವ ಪಕ್ಷಗಳ ಸಭೆಯು ಸರ್ವಾನುಮತದ ನಿರ್ಣಯ ತೆಗೆದುಕೊಂಡಿತು.

ತುಮಕೂರು ಜಿಲ್ಲೆಯ ಶಿರಾ ಮತ್ತು ಮಧುಗಿರಿ ತಾಲ್ಲೂಕುಗಳ ಸಮೀಪ ಬಚಾವತ್ ನ್ಯಾಯಮಂಡಳಿ ತೀರ್ಪನ್ನು ಉಲ್ಲಂಘಿಸಿ ಆಂಧ್ರಪ್ರದೇಶ ಸರ್ಕಾರ ಕೈಗೆತ್ತಿಕೊಂಡಿರುವ ಅಕ್ರಮ ಕಾಮಗಾರಿ ಕುರಿತು ಸುಪ್ರೀಂ ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು.

ಕೇರಳ: ಆಂಟನಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ

ತಿರುವನಂತಪುರ, ಮೇ 17– ಕಾಂಗ್ರೆಸ್ ಪಕ್ಷದ ನಾಯಕ ಎ.ಕೆ. ಆಂಟನಿ ಅವರು ಕೇರಳದ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.

ರಾಜ್ಯಪಾಲರಾದ ಎಸ್.ಎಸ್. ಕಾಂಗಾ ಅವರು ಪ್ರಮಾಣ ವಚನ ಬೋಧಿಸಿದರು.

ಅವರ ಜೊತೆ ಮುಸ್ಲಿಂ ಲೀಗ್ ನಾಯಕ ಪಿ.ಕೆ. ಕುಂಞಾಲಿ ಕುಟ್ಟಿ, ಕೇರಳ ಕಾಂಗ್ರೆಸ್ (ಎಂ) ನಾಯಕ ಕೆ.ಎಂ. ಮಣಿ, ಕೇರಳ ಕಾಂಗ್ರೆಸ್ (ಜಾಕೋಬ್ ಬಣ) ನಾಯಕ ಟಿ.ಎಂ. ಜಾಕೋಬ್, ಕೇರಳ ಕಾಂಗ್ರೆಸ್ನ (ಬಿ) ಮುಖ್ಯ ಸಚೇತಕ ಹಾಗೂ ಚಿತ್ರನಟ ಕೆ.ಬಿ. ಗಣೇಶ ಕುಮಾರ್, ಜೆಎಸ್ಎಸ್ ನಾಯಕರಾದ ಕೆ.ಆರ್. ಗೌರಿ, ಸಿಎಂಪಿ ನಾಯಕರಾದ ಎಂ.ವಿ. ರಾಘವನ್, ಆರ್ಎಸ್ಪಿ ನಾಯಕ ಬಾಬು ದಿವಾಕರ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.