ಟೆಹರಾನ್, ಮಾರ್ಚ್ 20– ಪರ್ಷಿಯಾದ ಷಾರವರ ಆಜ್ಞೆಯ ಮೇರೆ ಇಂದು ದೇಶದಾದ್ಯಂತ ‘ಮಾರ್ಷಲ್ ಲಾ’ ಮತ್ತು ಕರ್ಫ್ಯೂವನ್ನು ಜಾರಿಗೆ ತರಲಾಗಿದೆ. ಕಳೆದ ವಾರ ಮಜ್ಲಿಸ್ ಸಭೆಯು ಅನುಮೋದಿಸಿದ್ದ ಎಣ್ಣೆ ಗಣಿಗಳ ರಾಷ್ಟ್ರೀಕರಣ ಮಸೂದೆಯನ್ನು ಸೆನೇಟ್ ಸಭೆಯು ಅಂಗೀಕರಿಸಿತು. ಜನರಲ್ ಅಬ್ದುಲ್ ಹುಸೇನ್ ದೆಜಾಜಿಯವರನ್ನು ಗವರ್ನರನ್ನಾಗಿ ನೇಮಿಸಲಾಗಿದೆ.

ಇನಾಂ ಗ್ರಾಮಗಳ ರದ್ದು ಮಸೂದೆಗೆ ಒಮ್ಮತದ ಸಮರ್ಥನೆ

ಬೆಂಗಳೂರು, ಮಾರ್ಚ್ 20– ಇಂದಿನ ಶಾಸನಸಭೆಯಲ್ಲಿ ರೆವೆನ್ಯೂ ಸಚಿವ ಎಚ್. ಸಿದ್ದಯ್ಯನವರು ಮಂಡಿಸಿದ ಇನಾಂ ಗ್ರಾಮಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಮಾತನಾಡಿದ ಸದಸ್ಯರೆಲ್ಲರೂ ಏಕಕಂಠದಿಂದ ಸಮರ್ಥಿಸಿದರು. ಸೆಲೆಕ್ಟ್ ಸಮಿತಿಗೆ ಹೋಗುವ ಈ ಮಸೂದೆಯ ಮೇಲೆ ಇಂದೂ ಚರ್ಚೆ ನಡೆಯುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.