ಬುಧವಾರ, 18–4–1951

ದೆಹಲಿ, ಏ. 17– ಕೈಗಾರಿಕಾ ಹಾಗೂ ವ್ಯವಸಾಯ ಕಾರ್ಮಿಕರ ಕನಿಷ್ಠ ಕೂಲಿಯನ್ನು ನಿರ್ಧರಿಸುವ ಬಗ್ಗೆ ಕಾಲ ಪರಿಮಿತಿಯನ್ನು ಹೆಚ್ಚಿಸುವಂತಹ ಕನಿಷ್ಠ ಕೂಲಿ ತಿದ್ದುಪಡಿ ಮಸೂದೆಯು ಇಂದು ಭಾರತ ಪಾರ್ಲಿಮೆಂಟಿನಲ್ಲಿ ಅಂಗೀಕರಿಸಲ್ಪಟ್ಟಿತು.

1948ರ ಕನಿಷ್ಠ ಕೂಲಿ ಶಾಸನವನ್ನು ಕಾರ್ಯಾನ್ವಯಗೊಳಿಸಲು ಸಂಸ್ಥಾನ ಸರ್ಕಾರಗಳಿಗೆ ಈ ಮಸೂದೆಯ ಪರಿಣಾಮವಾಗಿ ಇನ್ನೂ ಒಂದು ವರ್ಷ ಹೆಚ್ಚು ಕಾಲಾವಕಾಶ ದೊರೆತಿದೆ.

1948ರ ಕನಿಷ್ಠ ಕೂಲಿ ಶಾಸನದಲ್ಲಿ ಕಂಡ ಕೈಗಾರಿಕಾ ಸಂಸ್ಥೆಗಳಲ್ಲಿ ಕನಿಷ್ಠ ಕೂಲಿ ನಿರ್ಧರಿಸಲು 1950ರ ಮಾರ್ಚ್ 31ನೇ ತಾರೀಖು ಕೊನೆಯ ಅವಧಿಯಾಗಿತ್ತು. ಈ ಅವಧಿಯನ್ನು ಈಗ 1951ರ ಮಾರ್ಚ್ 31ನೆಯ ತಾರೀಖಿನವರೆಗೆ ಮುಂದುವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.