ವಾಣಿವಿಲಾಸಪುರ: ಏ.29– ಕಾಂಗ್ರೆಸ್ಸಿ ನಲ್ಲಿ ಐಕ್ಯತೆ ಸಾಧನೆ ಬಗ್ಗೆ ಶುಭ ಸಮಾಚಾರ ಕೇಳಲು ಕಾತುರವಾಗಿ ಸೇರಿದ್ದ ಎಂ.ಪಿ.ಸಿ.ಸಿ. ಸಭೆ ನಿರಾಶೆಗೊಂಡು ಮುಕ್ತಾಯಗೊಳ್ಳುವ ಮುನ್ನ ‘ಏನಾದರೂ ಆಗಲಿ, ಒಂದು ತೀರ್ಮಾನಕ್ಕೆ ಬಂದು ಐಕ್ಯತೆ ಸಾಧಿಸಲು ಸಂಕಲ್ಪ ಮಾಡಿದ್ದೇವೆ’ ಎಂಬ ಭರವಸೆಯನ್ನು ತನ್ನ ನಾಯಕ ವರ್ಗದಿಂದ ಪಡೆಯಿತು.

ಶ್ರೀ ಕೆ. ಹನುಮಂತಯ್ಯನವರು ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಕಾಂಗ್ರೆಸ್ಸಿನಲ್ಲಿ ಅರ್ಥಾತ್ ಶಾಸನಸಭಾ ಕಾಂಗ್ರೆಸ್ ಪಕ್ಷದಲ್ಲಿ ಐಕ್ಯತೆ ಸಾಧಿಸಲು ಕಳೆದ ಸುಮಾರು 1 ತಿಂಗಳಿಂದ ನಡೆಯುತ್ತಿದ್ದ ಮಾತುಕತೆಗಳ ಫಲವಾಗಿ ಮೈಸೂರು ಮಂತ್ರಿಮಂಡಲ ಸದ್ಯದಲ್ಲೇ ವಿಸ್ತಾರಗೊಳ್ಳುವುದೆಂದು ಖಚಿತವಾಗಿ ಗೊತ್ತಾಗಿದೆ. ಐಕ್ಯತೆಯ ಸಾಧನೆಗೆ ಮಂತ್ರಿಮಂಡಲ ವಿಸ್ತರಣೆಯ ಪರಿಹಾರ ಮಾರ್ಗ ನಿರ್ಧಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.