ದೊರೆ ಬೀರೇಂದ್ರ, ರಾಣಿ ಸೇರಿ 13 ಜನರ ಕಗ್ಗೊಲೆ

ಕಠ್ಮಂಡು, ಜೂನ್ 2 (ಪಿಟಿಐ)– ರಾಜಮನೆತನಗಳ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಎನ್ನಬಹುದಾದ ಘಟನೆಯಲ್ಲಿ ನೇಪಾಳದ ದೊರೆ ಬೀರೇಂದ್ರ (55), ರಾಣಿ ಐಶ್ವರ್ಯ (52), ಒಬ್ಬ ರಾಜಕುಮಾರ ಮತ್ತು ಒಬ್ಬ ರಾಜಕುಮಾರಿ ಹಾಗೂ ರಾಜ ಕುಟುಂಬದ ಇತರ ಒಂಬತ್ತು ಮಂದಿ ಬರ್ಬರ ರೀತಿಯಲ್ಲಿ ಕೊಲೆಯಾಗಿದ್ದಾರೆ.

ತನ್ನ ವಿವಾಹಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದದಿಂದ ಸಿಟ್ಟಿಗೆದ್ದ (ರಾಜ ಸಿಂಹಾಸನಕ್ಕೆ ನಿಯೋಜನೆಗೊಂಡಿದ್ದ) ರಾಜಕುಮಾರ ದೀಪೇಂದ್ರ ತನ್ನ ಸ್ವಂತ ತಂದೆ, ತಾಯಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇಡೀ ಕುಟುಂಬವನ್ನೇ ವರೆಸಿ ಹಾಕುವಂತೆ ಕುಟುಂಬದ ಇತರ ಹನ್ನೊಂದು ಜನರ ಮೇಲೂ ಗುಂಡು ಹಾರಿಸಿದ್ದಲ್ಲದೆ ರಾಜಕುಮಾರ ದೀಪೇಂದ್ರ ತನ್ನ ಹಣೆಪಕ್ಕದ ಜಾಗಕ್ಕೂ ಗುಂಡು ಹಾರಿಸಿಕೊಂಡಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ರಾಜಕುಮಾರ ತನ್ನ 35ನೇ ವರ್ಷಕ್ಕಿಂತ ಮೊದಲು ಮದುವೆಯಾಗಿ ಮಕ್ಕಳನ್ನು ಪಡೆದರೆ ಅದು ರಾಜಕುಮಾರನ ತಂದೆಯ ಸಾವಿಗೆ ಕಾರಣವಾಗುತ್ತದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು. ಈ ಜ್ಯೋತಿಷ ನಂಬಿದ್ದ ರಾಣಿ, ರಾಜಕುಮಾರ ಇನ್ನೂ ಆರು ವರ್ಷ ಮದುವೆಯಾಗದಂತೆ ಉಳಿಯಬೇಕೆಂದು ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.