ಇವತ್ತು ಐವತ್ತು, 1976ರ ಮೇ 7ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.

1976ರ ಮೇ 7ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಚಿನಕುರಳಿ. ‘ಹೋಟೆಲ್ ತಿಂಡಿ ದರಗಳು ಇಳಿದಿವೆಯಂತೆ... ಆಫೀಸಿನಿಂದ ಬರೋವಾಗ ಜೇಬಿನಲ್ಲಿ ಚಿಲ್ಲರೆ ಹಣ ಉಳಿಸಿಕೊಂಡು ಬರ್ತೀರೋ ಅಥವಾ ಇನ್ನೂ ಒಂದು ಸಾರಿ ಹೆಚ್ಚು ಕಾಫಿ ಕುಡಿದು ಮುಗಿಸಿಕೊಂಡೇ ಬರ್ತೀರೋ...!

ಬೆಂಗಳೂರಿನ ಶಿವಾಜಿ ನಗರದ ಹೋಟೆಲ್ ಒಂದರಲ್ಲಿ ಆಹಾರವನ್ನು ಸರಬರಾಜು ಮಾಡುವ ಮುನ್ನ ವಸ್ತುಗಳಂತೆ, ತೂಕ ಮಾಡಿ ಗ್ರಾಹಕರಿಗೆ ನೀಡುತ್ತಿರುವ ಅಪರೂಪದ ಚಿತ್ರವನ್ನು ಪ್ರಜಾವಾಣಿ ಪ್ರಕಟಿಸಿದೆ.

ವೆಸ್ಟ್ ಇಂಡೀಸ್ನ ಮಹಿಳಾ ಕ್ರಿಕೆಟ್ ತಂಡವು ಭಾರತ ಪ್ರವಾಸವನ್ನು ಕೈಗೊಂಡಿತ್ತು. 16 ಜನರ ತಂಡವು ಭಾರತದಲ್ಲಿ 45 ದಿನಗಳ ಕಾಲ ಉಳಿಯಲಿದ್ದು, ವಿವಿಧ ಮಾದರಿಯ ಟೆಸ್ಟ್ ಪಂದ್ಯಗಳನ್ನಾಡಲು ಸಿದ್ಧವಾಗಿತ್ತು.

1974–76 ರಲ್ಲಿ ಭಾರತದ ಆಹಾರ ದಾಸ್ತಾನು ಹೀಗಿತ್ತು....

ಹೋಟೆಲ್ವೊಂದರಲ್ಲಿ ತಿಂಡಿ ತಿನ್ನುವ ಮುನ್ನ ಆಹಾರದ ತೂಕ ಸರಿಯಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ ಎಂಬ ಸೂಚನಾ ಫಲಕ ಹಾಕಲಾಗಿದೆ. ಜೊತೆಗೆ ದರದ ಪಟ್ಟಿಯೂ ಇದೆ.

ಹಿಂದಿಯನ್ನು ಕ್ರಮೇಣ ಜಾರಿಗೆ ತರಬೇಕೇ ಹೊರತು, ಜನರಲ್ಲಿ ಹೇರಲಾಗುತ್ತಿದೆಯೆಂಬ ಭಾವನೆ ಮೂಡಬಾರದು ಎಂಬ ರಾಜ್ಯಪಾಲರ ಮಾತನ್ನು ಉಲ್ಲೇಖಿಸಿ ’ಕಡ್ಡಾಯ ಎಲ್ಲೂ ಅಸೂಕ್ತ’ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿ ಪತ್ರಿಕೆಯು 1976ರ ಮೇ 7ರಂದು ಸಂಪಾದಕೀಯ ಪ್ರಕಟಿಸಿತ್ತು.

ಪವಾಡ ನಡೆಸುವವರಿಗೆ ಖ್ಯಾತ ವಿಚಾರವಾದಿ ಡಾ. ಏಬ್ರಹಾಂ ಟಿ.ಕೊವೂರ್ ಅವರು ಸವಾಲೊಂದು ಹಾಕಿದ್ದರು. ಪವಾಡಗಳನ್ನು ವೈಜ್ಞಾನಿಕ ಪರೀಕ್ಷೆಗೊಳಪಡಿಸಬೇಕು. ಅಂಥ ಪರೀಕ್ಷೆಯಲ್ಲಿ ಯಶಸ್ವಿಯಾದವರಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು ಎಂದು ಸವಾಲೆಸೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.