ಸ್ಥಳೀಯ ಸಂಸ್ಥೆ ಚುನಾವಣೆ: ಏಪ್ರಿಲ್ 19ರ ಗಡುವು

ಬೆಂಗಳೂರು, ಮಾರ್ಚ್ 8– ರಾಜ್ಯದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಪ್ರಕ್ರಿಯೆಯನ್ನು ಏಪ್ರಿಲ್ 19ರ ಒಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ವಾರ್ಡ್ಗಳಿಗೆ ಮೀಸಲಾತಿ ಕುರಿತಂತೆ ಮಾರ್ಚ್ 13ರ ಒಳಗೆ ಅಧಿಸೂಚನೆ ಹೊರಡಿಸಬೇಕು ಮತ್ತು ಈ ಸಂಬಂಧ ತೆಗೆದುಕೊಂಡ ಕ್ರಮದ ಬಗೆಗೆ ಮರುದಿನವೇ (ಮಾರ್ಚ್ 14) ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಿ.ಸಿ. ಭರೂಕ ಮತ್ತು ಶ್ರೀಧರರಾವ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿತು.

ಪಾಂಡವಪುರ ಸಕ್ಕರೆ ಕಾರ್ಖಾನೆಗೆ ಬೆಂಕಿ: ರೂ. 5 ಕೋಟಿ ನಷ್ಟ

ಮಂಡ್ಯ, ಮಾರ್ಚ್ 8– ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಸುಮಾರು ರೂ. 5 ಕೋಟಿ ನಷ್ಟ ಉಂಟಾಗಿದೆ.

ಕಾರ್ಖಾನೆಯ ಮೊಗಸಾಲೆಯಲ್ಲಿದ್ದ (ಡ್ರೈಯರ್ ಹಾಲ್) ಸಕ್ಕರೆ ಚೀಲಗಳಿಗೆ ರಾತ್ರಿ 8ರಿಂದ 8.30ರಲ್ಲಿ ಬೆಂಕಿ ಬಿದ್ದಿದೆ. ಇದರಿಂದ ರೂ. 4 ಕೋಟಿ 75 ಲಕ್ಷ ಮೌಲ್ಯದ 34,327 ಸಕ್ಕರೆ ಚೀಲಗಳು ಮತ್ತು ಮೂರ್ನಾಲ್ಕು ಕಡೆ ಗೋಡೆ ಕುಸಿದು ರೂ. 25 ಲಕ್ಷದಷ್ಟು ನಷ್ಟ ಸಂಭವಿಸಿದೆ.

ಇದಲ್ಲದೆ, ವಿದ್ಯುತ್ ಕೇಬಲ್ಗಳು ಹಾನಿಗೆ ಒಳಗಾಗಿವೆ. ಕಾರ್ಖಾನೆ ಯಂತ್ರೋಪಕರಣಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ ಮತ್ತು ಯಾರಿಗೂ ಏನೂ ತೊಂದರೆ ಆಗಿಲ್ಲ. ಶಾರ್ಟ್ ಸರ್ಕಿಟ್ನಿಂದ ಬೆಂಕಿ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.