ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ 25.8.1996

Last Updated 24 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

‘ಖಾಸಗಿ ಸ್ಥಳೀಯ ಬ್ಯಾಂಕ್‌ಗಳ ಸ್ಥಾಪನೆ ಗ್ರಾಮೀಣ ಸಾಲ ವ್ಯವಸ್ಥೆಗೇ ಕುತ್ತು’

ಬೆಂಗಳೂರು, ಆ. 24– ಖಾಸಗಿ ಸ್ಥಳೀಯ ಬ್ಯಾಂಕುಗಳ ಸ್ಥಾಪನೆಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿ ರುವ ನಿರ್ಧಾರದ ಬಗ್ಗೆ ರಾಜ್ಯ ಯೋಜನಾ ಮಂಡಳಿ ತೀವ್ರ ಆತಂಕ ವ್ಯಕ್ತಪಡಿಸಿದೆ.

ಹೊಸ ಸ್ಥಳೀಯ ಬ್ಯಾಂಕುಗಳ ಸ್ಥಾಪನೆಗೆ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ಅಂತಿಮಗೊಳಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಡಾ. ಡಿ.ಎಂ.ನಂಜುಂಡಪ್ಪ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕ್ರಮವು ಗ್ರಾಮೀಣ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕುಗಳ ಗ್ರಾಮೀಣ ಶಾಖೆಗಳನ್ನು ಆಧರಿಸಿರುವ ಗ್ರಾಮೀಣ ಸಾಲ ವ್ಯವಸ್ಥೆಗೇ ಕುತ್ತು ತರಲಿದೆ ಎಂದು ಅವರು ಹೇಳಿದರು.

ಅಮರನಾಥ: ಸತತ ಹಿಮಪಾತ, 120 ಸಾವು; ಯಾತ್ರಿಕರ ವಾಪಸಿಗೆ ಸೂಚನೆ

ಶ್ರೀನಗರ, ಆ. 24 (ಪಿಟಿಐ)– ಭಾರೀ ಮಳೆ ಹಾಗೂ ಹಿಮಪಾತದಿಂದಾಗಿ ಮೃತಪಟ್ಟ ಅಮರನಾಥ ಯಾತ್ರಿಕರ ಸಂಖ್ಯೆ ಇಂದು 120ಕ್ಕೆ ಏರಿದ್ದು, ಇತರ 60 ಸಾವಿರಯಾತ್ರಿಕರು ಪಹಲ್‌ಗಾಂವ್ ಹಾಗೂ ಪಂಚತರ್ಣಿ ಮಧ್ಯೆ ಸಿಕ್ಕಿಬಿದ್ದಿದ್ದಾರೆ.

ನಿಂದನೆಗೆ ವೇದಿಕೆ; ರಾಜಕೀಯ ಸಾಧನೆಯ ಪ್ರವಾಸ

ಬೆಂಗಳೂರು, ಆ. 24– ಇಬ್ಬರು ರಾಜಕೀಯ ಧುರೀಣರಾದ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಈ ವಾರ ರಾಜ್ಯದಲ್ಲಿ ನಡೆಸಿದ ‘ಅವಿಸ್ಮರಣೀಯ’ ಪ್ರವಾಸದ ನೆನಪುಗಳನ್ನು ಜನತೆ ಈಗ ಮೆಲುಕು ಹಾಕುತ್ತಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನಿಯವರು ಕೈಗೊಂಡ ಮೊದಲ ಪ್ರವಾಸ ಹಾಗೂ ‘ಜನಾದೇಶ’ ಪಡೆಯಲು ಹೆಗಡೆ ಅವರು ನಡೆಸಿದ ಕೊನೆಯ ಸುತ್ತಿನ ಪ್ರವಾಸಗಳು ಜನಹಿತಕ್ಕಿಂತ ಹೆಚ್ಚಾಗಿ ರಾಜಕೀಯ ಹಿತಸಾಧನೆಯ ಅಸ್ತ್ರವಾಗಿ ಬಳಕೆಯಾಗಿ
ರುವುದು ಜನವಲಯದಲ್ಲಿ ತೀರಾ ಚರ್ಚೆಗೆ ಗ್ರಾಸ ಒದಗಿಸಿದೆ. ಪರಸ್ಪರ ರಾಜಕೀಯ ಸಮರದ ದ್ಯೋತಕವಾಗಿ ಏರ್ಪಾಡಾಗಿದ್ದ ಇಬ್ಬರು ಮುಖಂಡರ ಬಹಿರಂಗ ಸಭೆಗಳೂ ಪರಸ್ಪರ ದೋಷಾರೋಪಣೆ, ನಿಂದನೆ, ಟೀಕೆಗಳ ವೇದಿಕೆಗಳಾಗಿ ಮಾರ್ಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT