ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಬುಧವಾರ 2–4–1997

Last Updated 1 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬಿಕ್ಕಟ್ಟು ಶಮನಕ್ಕೆ ರಂಗ, ಕಾಂಗ್ರೆಸ್ ಸಮಾಲೋಚನೆ

ನವದೆಹಲಿ, ಏ. 1– ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರ್ಕಾರದ ಹಣೆಬರಹದ ಬಗೆಗೆ ಕಾಂಗ್ರೆಸ್ ಮತ್ತು ರಂಗದ ನಾಯಕರ ನಡುವಣ ಪರಸ್ಪರ ರಹಸ್ಯ ಮಾತುಕತೆಗಳು ನಡೆಯುತ್ತಿದ್ದು, ರಂಗ ಸರ್ಕಾರ ಉಳಿದರೂ ಗೌಡರ ನಾಯಕತ್ವ ಬದಲಾಗುವ ಸಾಧ್ಯತೆಗಳು ಹೆಚ್ಚಿಗಿ ಕಂಡು ಬರುತ್ತಿವೆ.

ದೇವೇಗೌಡ ಅವರು ಸರ್ಕಾರ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಕೈಜೋಡಿಸುವ ಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಆಪಾದಿಸಿದ್ದು ಅವರ ನಾಯಕತ್ವ ಬದಲಾವಣೆಯಾಗಬೇಕೆಂಬ ಪಟ್ಟು ಹಿಡಿದಿದ್ದಾರೆ.

ತಲ್ಲಣ ತಂದಿದ್ದ ಲಕ್ಕೂಭಾಯಿ ಪಾಠಕ್ ನಿಧನ

ಲಂಡನ್, ಏ. 1(ಪಿಟಿಐ)– ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಮತ್ತಿತರರು ತಮಗೆ ಒಂದು ಲಕ್ಷ ಡಾಲರ್ ವಂಚಿಸಿದ್ದರು ತಮಗೆ ಒಂದು ಲಕ್ಷ ಡಾಲರ್ ವಂಚಿಸಿದ್ದರು ಎಂದು ಆರೋಪಿಸಿದ್ದ ಆನಿವಾಸಿ ಭಾರತೀಯ ಉದ್ಯಮಿ ಲಕ್ಕೂಭಾಯಿ ಪಾಠಕ್ (76) ನಿನ್ನೆ ಇಲ್ಲಿ ನಿಧನರಾದರು.

‘ಉಪ್ಪಿನಕಾಯಿ ರಾಜ’ ಎಂದೇ ಇಂಗ್ಲೆಂಡ್‌ನಲ್ಲಿ ಖ್ಯಾತರಾಗಿದ್ದ ಪಾಠಕ್ ಸುಮಾರು 25 ದಶಲಕ್ಷ ಪೌಂಡ್ ಸ್ಟರ್ಲಿಂಗ್ ಉದ್ಯಮದ ಅಧಿಪತಿಯಾಗಿದ್ದರು. ಭಾರತದಲ್ಲಿ ತಮಗೆ ಗುತ್ತಿಗೆಯೊಂದನ್ನು ನೀಡಲು ಚಂದ್ರಸ್ವಾಮಿ 1987ರಲ್ಲಿ ನ್ಯೂಯಾರ್ಕ್‌ನಲ್ಲಿ ತಮ್ಮಿಂದ ಒಂದು ಲಕ್ಷ ಡಾಲರ್ ಹಣ ಪಡೆದಿದ್ದರು ಎಂದು ಭಾರತೀಯ ಹೈಕಮಿಷನ್‌ಗೆ ದೂರು ನೀಡಿದ್ದರು. ಅಂದಿನ ವಿದೇಶಾಂಗ ಸಚಿವ ನರಸಿಂಹರಾವ್ಭರವಸೆ ನೀಡಿದ್ದರಿಂದಲೇ ತಾವು ಹಣ ಕೊಟ್ಟಿದ್ದು ಎಂದು ಪಾಠಕ್ ಹೇಳಿದ್ದರು. ಪಾಠಕ್ ನಿಧನ ಪ್ರಕರಣದ ಮೇಲೆ ಪರಿಣಾಮ ಬೀರದು ಎಂದು ಸಿಬಿಐ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT