ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 26–1–1996

Last Updated 25 ಜನವರಿ 2021, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರ ನಿರ್ಮೂಲನೆಗೆ ಚಳವಳಿ: ರಾಷ್ಟ್ರಪತಿ ಕರೆ

ನವದೆಹಲಿ, ಜ. 25 (ಯುಎನ್‌ಐ, ಪಿಟಿಐ)– ‘ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆ ಒಡ್ಡಿರುವ ಪಟ್ಟಭದ್ರ ಕೆಡುಕುಗಳಾದ ಭ್ರಷ್ಟಾಚಾರ, ಮತಾಂಧತೆ, ಜಾತಿವಾದ ಮತ್ತು ಅಪರಾಧೀಕರಣಗಳನ್ನು ಕಿತ್ತೊಗೆಯಲು ಜನಶಕ್ತಿಯನ್ನು ಒಗ್ಗೂಡಿಸಿ’ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ್‌ ಶರ್ಮಾ ಅವರು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಗಣರಾಜ್ಯೋತ್ಸವ ಭಾಷಣದಲ್ಲಿ ಜನರಿಗೆ ಕರೆ ನೀಡಿದರು.

‘ಸಮಾಜದಲ್ಲಿ ಬೇರುಬಿಟ್ಟಿರುವ ಈ ಕೆಡುಕುಗಳನ್ನು ಬಹಿರಂಗಪಡಿಸಿ ಕಿತ್ತೊಗೆಯಲು ಜನಶಕ್ತಿಯಿಂದ ಮಾತ್ರ ಸಾಧ್ಯ’ ಎಂದು ಘೋಷಿಸಿದ ರಾಷ್ಟ್ರಪತಿ, ‘ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಇರುವವರು ಈ ನಿಟ್ಟಿನಲ್ಲಿ ಅತ್ಯುನ್ನತ ವೈಯಕ್ತಿಕ ನಡವಳಿಕೆ ಮತ್ತು ಸ್ವಚ್ಛ ಸಾರ್ವಜನಿಕ ಬದುಕಿನ ಉತ್ತರದಾಯಿತ್ವವನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.

‘ಭ್ರಷ್ಟ ಅಧಿಕಾರಿಗಳನ್ನು ಚೆನ್ನಾಗಿ ಚಚ್ಚಿ...’

ಬೆಂಗಳೂರು, ಜ. 25– ‘ಭ್ರಷ್ಟ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕಂಡರೆ ಹಿಂದೆ ಮುಂದೆ ನೋಡಬೇಡಿ; ಕೋಲು ತಗಂಡು ಅವರನ್ನು ಚಚ್ಚಿಬಿಡಿ...’

ರಾಜ್ಯದ ಕಂದಾಯ ಸಚಿವ ಆರ್‌.ಎಲ್‌.ಜಾಲಪ್ಪ ಅವರು ಇಂದು ಕರ್ನಾಟಕದ ಜನತೆಗೆ ಮಾಡಿಕೊಂಡ ಮನವಿ ಇದು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ಏರ್ಪಡಿಸಿದ್ದ ‘ಪಂಚಾಯತ್‌ ರಾಜ್‌’ ಕಮ್ಮಟವನ್ನು ಉದ್ಘಾಟಿಸಿದ ಅವರು, ಈ ಭ್ರಷ್ಟಾಚಾರಕ್ಕೆ ಕಡಿವಾಣವೇ ಇಲ್ಲವಾಗಿರುವುದಕ್ಕೆ ತೀವ್ರ ವಿಷಾದ, ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT