ಬುಧವಾರ, ಮಾರ್ಚ್ 3, 2021
30 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ, 29–1–1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, ಜ. 28 (ಪಿಟಿಐ)– ಹವಾಲ ಹಗರಣದ ಫಲಾನುಭವಿಗಳಲ್ಲಿ ಒಬ್ಬರೆಂಬ ಆರೋಪ ಹೊಂದಿರುವ ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಎಸ್.ಆರ್‌.ಬೊಮ್ಮಾಯಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಜನತಾದಳದ ಹೊಸ ಅಧ್ಯಕ್ಷರಾಗಿ ಬಿಹಾರದ ಮುಖ್ಯಮಂತ್ರಿ ಲಲ್ಲೂ ಪ್ರಸಾದ್‌ ಯಾದವ್‌ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆ ನಿಚ್ಚಳವಾಗಿದೆ.

ಇದಕ್ಕೂ ಮುನ್ನ ಲಲ್ಲೂ ಪ್ರಸಾದ್‌ ಯಾದವ್‌ ಅವರು ಬೊಮ್ಮಾಯಿಯವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ನಿಲುವು ತಾಳಿದ್ದರೆನ್ನಲಾಗಿದೆ. ಆದರೆ ಹವಾಲ ಹಗರಣದಲ್ಲಿ ಒಳಗೊಂಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ, ಪಕ್ಷದ ಪ್ರತಿಷ್ಠೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಬೊಮ್ಮಾಯಿಯವರು ರಾಜೀನಾಮೆ ನೀಡುವುದು ಸೂಕ್ತ ಎಂಬ ನಿಲುವಿಗೇ ಪಕ್ಷದ ಹೆಚ್ಚಿನ ನಾಯಕರು ಒಲವು ತೋರಿಸಿದರು ಎನ್ನಲಾಗಿದೆ.

ಆದರೆ ಬೊಮ್ಮಾಯಿಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗದು ಎಂದೂ ಈ ನಾಯಕರು ಸಭೆಯಲ್ಲಿ ಅಭಿಪ್ರಾಯಪಟ್ಟರು.

ತಾಲ್ಲೂಕಿಗೊಂದು ವಸತಿ ಶಾಲೆ

ಬೆಳಗಾವಿ, ಜ. 28– ಬರುವ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟರಿಗಾಗಿ ಪ್ರತೀ ತಾಲ್ಲೂಕಿಗೆ ಒಂದರಂತೆ ವಸತಿ ಶಾಲೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ರಮೇಶ ಜಿಗಜಿಣಗಿ ಇಂದು ಇಲ್ಲಿ ತಿಳಿಸಿದರು.

ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ ನಿಗದಿ ಮಾಡಿರುವ 303 ಕೋಟಿ ರೂ.ಗಳನ್ನು ಕೋಳಿ ಕುರಿಗಳ ಸಾಲಕ್ಕಾಗಿ ಬಳಸದೇ ಸಾರ್ಥಕವಾಗಿ ವೆಚ್ಚ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು