ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಭಾನುವಾರ 29-12-1996

Last Updated 28 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಸಿಪಿಪಿ ನಾಯಕತ್ವಕ್ಕೆ ಸ್ಪರ್ಧೆ:ರಾವ್ ಬಣದ ಪಟ್ಟು

ನವದೆಹಲಿ, ಡಿ. 28 (ಪಿಟಿಐ, ಯುಎನ್ಐ)– ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆಯೇ ನಡೆಯಬೇಕು ಎಂದು ನರಸಿಂಹ ರಾವ್ ಬಣದ ಹತ್ತು ಸಂಸತ್ ಸದಸ್ಯರು ಹಾಗೂ ಕಾರ್ಯಕಾರಿಣಿ ಸದಸ್ಯ ರಾಜೇಶ್ ಪೈಲಟ್ ಅವರು ಇಂದು ಪ್ರತ್ಯೇಕ ಹೇಳಿಕೆ ನೀಡಿದ್ದು ಸರ್ವಾನುಮತದ ಆಯ್ಕೆಯ ಯತ್ನಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.

ಈ ಮಧ್ಯೆ ಮುಂಬಯಿಗೆ ಇಂದು ಬೆಳಿಗ್ಗೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರು, ಸಂಸದೀಯ ನಾಯಕನ ಆಯ್ಕೆಯ ವಿಚಾರಕ್ಕೆ ಸಂಬಂಧಿಸಿ, ಜನವರಿ 1ರಂದು ನಡೆಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿಯು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಕೆಎಸ್‌ನಗೆ ಪಂಪ ಪ್ರಶಸ್ತಿ ಪ್ರದಾನ

ಬನವಾಸಿ, ಡಿ. 28– ಕಾವ್ಯವು ಕವಿಯ ಕಾಲಮಾನದಲ್ಲಿ ಹುಟ್ಟಿದ ಅಮೂಲ್ಯ ಮತ್ತು ಸುಂದರ ಭಾವನೆಗಳನ್ನು ಒಳಗೊಂಡಿ ರುತ್ತದೆ. ಕಾರಣ ನಾವು ಕಾವ್ಯ ಅರ್ಥ ಮಾಡಿ ಕೊಳ್ಳಬೇಕು ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಇಂದು ಇಲ್ಲಿ ಅಭಿಪ್ರಾಯಪಟ್ಟರು.

1995ರ ಪಂಪ ಪ್ರಶಸ್ತಿಯನ್ನು ನಾಡಿನ ಹಿರಿಯ ಕವಿಗಳಾದ ಡಾ. ಕೆ.ಎಸ್.ನರಸಿಂಹಸ್ವಾಮಿ ಅವರ ‘ದುಂಡು ಮಲ್ಲಿಗೆ’ ಕವನ ಸಂಕಲನಕ್ಕೆ ನೀಡಿ ಇಂದು ಗೌರವಿಸಲಾಯಿತು. ಪಟೇಲ್ ಅವರು ನರಸಿಂಹ ಸ್ವಾಮಿ ಅವರಿಗೆ ಶಾಲು ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT