ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ಶನಿವಾರ 28.9.1996

Last Updated 27 ಸೆಪ್ಟೆಂಬರ್ 2021, 15:35 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ನಜೀಬುಲ್ಲಾ ಹತ್ಯೆ: ಅಧ್ಯಕ್ಷ ರಬ್ಬಾನಿ, ಪ್ರಧಾನಿ ಪರಾರಿ

ಕಾಬೂಲ್, ಸೆ. 27 (ಎಪಿ, ಪಿಟಿಐ, ಎಎಫ್‌ಪಿ, ರಾಯಿಟರ್ಸ್‌)– ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ತಾಲಿಬ್ ಇಸ್ಲಾಂ ಉಗ್ರಗಾಮಿಗಳು ಇಂದು ಮುಂಜಾನೆ ಕ್ಷಿಪ್ರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಮಾಜಿ ಅಧ್ಯಕ್ಷ ನಜೀಬುಲ್ಲಾ ಅವರನ್ನು ಭೀಕರವಾಗಿ ಕೊಲ್ಲಲಾಗಿದೆ. ಹಾಲಿ ಅಧ್ಯಕ್ಷ ಬುರ್ಹಾನುದ್ದೀನ್ ರಬ್ಬಾನಿ ಹಾಗೂ ಪ್ರಧಾನಿ ಗುಲ್ಬುದ್ದೀನ್ ಹೆಕ್‌ಮತಿಯಾರ್ ಅವರು ಪರಾರಿಯಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅಧಿಕಾರ ಕ್ಕಾಗಿ ಆಂತರಿಕ ಕದನ ನಡೆಯುತ್ತಿದ್ದ ಅಫ್ಗಾನಿಸ್ತಾನದಲ್ಲಿ ರಾಜಧಾನಿ ಕಾಬೂಲನ್ನು ಉಗ್ರಗಾಮಿಗಳು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿ ಗ್ರಾಮೀಣ ಅಭ್ಯರ್ಥಿಗೆ ಶೇ 10 ಕೃಪಾಂಕ: ಸಂಪುಟ ನಿರ್ಧಾರ

ಬೆಂಗಳೂರು. ಸೆ. 27– ಸರ್ಕಾರಿ ಹುದ್ದೆಗಳ ನೇಮಕಾತಿಗೆ ಹಾಗೂ ವೃತ್ತಿಪರ ಶಿಕ್ಷಣ ಪ್ರವೇಶಕ್ಕೆ ಗ್ರಾಮೀಣ ಪ್ರದೇಶಗಳ
ಅಭ್ಯರ್ಥಿಗಳಿಗೆ ಅನುಕೂಲ ಆಗುವಂತೆ ಮಾಡಲು ಶೇ 10ರಷ್ಟು ಕೃಪಾಂಕ ನೀಡಲು ರಾಜ್ಯ ಸಚಿವ ಸಂಪುಟ ಇಂದು ಇಲ್ಲಿ ತೀರ್ಮಾನಿಸಿದೆ.

ರಾಜ್ಯದಲ್ಲಿ 50,000ದವರೆಗೆ ಮತ್ತು ಅದಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇ ಶಗಳಲ್ಲಿ 1ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವವರನ್ನು ಗ್ರಾಮೀಣ ಅಭ್ಯರ್ಥಿಗಳ ವ್ಯಾಪ್ತಿಗೆ ತರಲು ಸಂಪುಟ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT