ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ, 2–12–1971

Last Updated 1 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಕೇಂದ್ರ ಸಚಿವರ ಆಸ್ತಿ– ಪಾಸ್ತಿ

ನವದೆಹಲಿ, ಡಿ. 1– ಪ್ರಧಾನಮಂತ್ರಿ ಇಂದಿರಾಗಾಂಧಿಯವರು ಇಂದು ಲೋಕಸಭೆಯಲ್ಲಿ ತಮ್ಮ ಸಂಪುಟದ ಸಚಿವರುಗಳು ದೆಹಲಿಯಲ್ಲಿ ಹೊಂದಿರುವ ಆಸ್ತಿ ಪಾಸ್ತಿಯ ವಿವರ ನೀಡಿದರು.

ರಾವ್‌ ಬೀರೇಂದ್ರಸಿಂಗ್‌ ಅವರ ಪ್ರಶ್ನೆಗೆ ಪ್ರಧಾನಿಯವರು ಲಿಖಿತ ಉತ್ತರದಲ್ಲಿ ತಿಳಿಸಿರುವ ಆಸ್ತಿ, ಪಾಸ್ತಿ ವಿವರ ಹೀಗಿದೆ: ಪ್ರಧಾನಮಂತ್ರಿ ಇಂದಿರಾಗಾಂಧಿ, 72,675 ರೂ. ಬೆಲೆ ಬಾಳುವ ಕೃಷಿ ಯೋಗ್ಯ ಭೂಮಿ, ಕೃಷಿ ಸಚಿವ ಫಕ್ರುದ್ದಿನ್‌ ಆಲೀ ಅಹ್ಮದ್‌ ಮತ್ತು ಅವರ ಪತ್ನಿಯವರ ಸಂಯುಕ್ತ ಒಡೆತನದಲ್ಲಿ 2,75,000 ರೂ. ಬೆಲೆ ಬಾಳುವ ಕಟ್ಟಡ, ಸಂಸದೀಯ ವ್ಯವಹಾರಗಳ ಸಚಿವ ರಾಜ ಬಹದೂರ್‌ ಮತ್ತು ಅವರ ಪತ್ನಿಯ ಸಂಯುಕ್ತ ಒಡೆತನದಲ್ಲಿ 1,91,444 ರೂ. ಬೆಲೆ ಬಾಳುವ ಮನೆ, ನಾಗರಿಕ ವಿಮಾನಯಾನ ಶಾಖೆ ಸಚಿವ ಕರಣ್‌ಸಿಂಗ್‌: 4,99,507 ರೂಪಾಯಿ ಬೆಲೆ ಬಾಳುವ ಮನೆ, ಕರಣ್‌ಸಿಂಗ್‌ ಅವರ ಪುತ್ರಿ 1,88,791 ರೂ. ಬೆಲೆ ಬಾಳುವ ಮನೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT