ಕೇಂದ್ರ ನೌಕರರಿಗೆ ಮೂಲವೇತನ ಜತೆ ತುಟ್ಟಿಭತ್ಯೆ ವಿಲೀನ
ನವದೆಹಲಿ, ಮಾರ್ಚ್ 25– ಮೂರನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನಗಳನ್ನು ಪುನರ್ ವಿಮರ್ಶಿಸುವಾಗ ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಿ, ಬೆಲೆ ಸೂಚ್ಯಂಕ ಏರಿಕೆಯಲ್ಲಿ ಪ್ರತಿ ಹತ್ತು ಪಾಯಿಂಟುಗಳ ಏರಿಕೆಯ ಆಧಾರದ ಮೇಲೆ ಶೇಕಡಾವಾರು ವೇತನ ಏರಿಸುವ ಸೂತ್ರವೊಂದನ್ನು ಶಿಫಾರಸು ಮಾಡಿದೆ.
1973ರ ಜನವರಿ 1ರಂತೆ ಸೂಚ್ಯಂಕದ ಮಟ್ಟ 200 ಪಾಯಿಂಟು. ಈ ಸೂಚ್ಯಂಕ ಮಟ್ಟವನ್ನು ಹೊಸ ವೇತನ ಸ್ವರೂಪ ರಚನೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.