ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶುಕ್ರವಾರ, 01-12-1972

Last Updated 30 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಪಾಕ್‌ ಜತೆ ವಿವಾದ ಇತ್ಯರ್ಥಕ್ಕೆ ಮಾತುಕತೆ ಸಾಧ್ಯತೆ ಪರಿಶೀಲನೆ

ನವದೆಹಲಿ, ನ. 30– ಜಮ್ಮು–ಕಾಶ್ಮೀರದಲ್ಲಿ ಹತೋಟಿ ರೇಖೆ ಗುರುತಿಸುವ ವಿಷಯದಲ್ಲಿ ಎದ್ದಿರುವ ವಿವಾದವನ್ನು ಬಗೆಹರಿಸಲು ಪ್ರಧಾನ ದಂಡ ನಾಯಕರ ಮಟ್ಟದಲ್ಲಿಯಾಗಲೀ ಇಲ್ಲವೇ ಇನ್ಯಾವುದೇ ಮಟ್ಟದಲ್ಲಿಯಾಗಲೀ ಪಾಕಿಸ್ತಾನದ ಜತೆ ಮಾತುಕತೆಯ ಸಾಧ್ಯತೆಯನ್ನು ಭಾರತ ಪರಿಶೀಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಸ್ವರಣ್‌ ಸಿಂಗ್‌ ಅವರು ಇಂದು ಘೋಷಿಸಿದರು.

ವಿದೇಶಿ ವ್ಯವಹಾರಗಳನ್ನು ಕುರಿತ ಎರಡು ದಿನಗಳ ಚರ್ಚೆಗೆ ಉತ್ತರವಾಗಿ ಈ ಘೋಷಣೆ ಮಾಡಿದ ಸ್ವರಣ್‌ ಸಿಂಗ್‌ ಅವರು, ‘ಸಣ್ಣ ಪ್ರಶ್ನೆ’ಯ ಮೇಲಣ ವಿವಾದ ಎಂಬ ಪಾಕಿಸ್ತಾನದ ಅಭಿಪ್ರಾಯವನ್ನು ಭಾರತ ಗಮನಿಸಿದೆ ಎಂದು ಹೇಳಿದರು.

ಸಿಮ್ಲಾ ಒಪ್ಪಂದದ ಅನ್ವಯ ಶಾಂತಿಯುತವಾಗಿ ಹಾಗೂ ಉಭಯಪಕ್ಷೀಯವಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕೆಂಬ ನಿಲುವಿಗೆ ಸರ್ಕಾರದ ಈ ನಿರ್ಧಾರ ಹೊಂದುತ್ತದೆ ಎಂದು ಅವರು ತಿಳಿಸಿದರು.

ನ್ಯಾಯ ಬೆಲೆಯಲ್ಲಿ ಸರ್ಕಾರಿ ನೌಕರರಿಗೆ ಶೀಘ್ರವೇ ದಿನಬಳಕೆ ಸಾಮಗ್ರಿ ಮಾರಾಟ

ಬೆಂಗಳೂರು, ನ. 30– ರಾಜ್ಯ ಸರ್ಕಾರಿ ನೌಕರರಿಗೆ ನ್ಯಾಯಬೆಲೆಯಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸುವ ವ್ಯವಸ್ಥೆ ಮಾಡಲು ಸರ್ಕಾರ ಸಮ್ಮತಿಸಿದೆ.

ಅಕ್ಕಿ, ಗೋದಿ, ರಾಗಿ, ಜೋಳ, ಖಾದ್ಯತೈಲ, ವನಸ್ಪತಿ, ಸಕ್ಕರೆ ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ನೌಕರರಿಗೆ ಒದಗಿಸುವುದಕ್ಕಾಗಿ ‘ಖರೀದಿ ಮತ್ತು ಮಾರಾಟ ಸಂಸ್ಥೆ’ಯೊಂದನ್ನು ರಚಿಸಬೇಕೆಂಬ ರಾಜ್ಯ ಸರ್ಕಾರಿ ನೌಕರರ ಸಂಘದ ಸಲಹೆಯನ್ನು ಅಂಗೀಕರಿಸಿದ ಹಣಕಾಸು ಸಚಿವರು, ಆ ಬಗ್ಗೆ ಯೋಜನೆಯನ್ನು ಕಾರ್ಯಗತಗೊಳಿಸಲು ವಿವರಗಳನ್ನು ಸಿದ್ಧಗೊಳಿಸುವಂತೆ ಹಣಕಾಸು ಇಲಾಖೆಯ ಕಮಿಷನರ್‌ ಅವರಿಗೆ ಸೂಚನೆ ಇತ್ತಿದ್ದಾರೆಂದು ಸಂಘದ ಅಧ್ಯಕ್ಷ ಕೆ.ಎ.ಕೇಶವಮೂರ್ತಿ ಅವರು ಇಂದು ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT