ಶನಿವಾರ, ಏಪ್ರಿಲ್ 1, 2023
23 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಭಾನುವಾರ, 28–1–1973

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಪ್ಯಾದಿಂದ ಆಮೆರಿಕ ಸೇನೆ ವಾಪಸು ಬೇಡ: ಕಮ್ಯುನಿಸ್ಟ್‌ ಚೀನ ಸಲಹೆ

ನ್ಯೂಯಾರ್ಕ್‌, ಜ. 27– ಏಪ್ಯಾದಲ್ಲಿನ ಅಮೆರಿಕ ಸೈನ್ಯವನ್ನು ಆತುರಾತುರದಿಂದ ಕುಗ್ಗಿಸುವುದರ ವಿರುದ್ಧ ಚೀನದ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಏಷ್ಯಾದಿಂದ ಅಮೆರಿಕ ಸೇನೆ ಕಾಲ್ತೆಗೆದಲ್ಲಿ ಅದರಿಂದ ನಾಳೆ ಬೇರೆಯವರಿಗೆ ‘ದುಷ್ಪ್ರೇರಣೆ’ ಉಂಟಾಗಬಹುದು ಎಂದು ಚೀನ ಅಮೆರಿಕಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

ಅಮೆರಿಕ ಸೇನೆ ಕಾಲ್ತೆಗೆದಲ್ಲಿ ಏಷ್ಯಾದಲ್ಲಿ ಜಪಾನಿನ ಮಿಲಿಟರಿ ಪ್ರಾಬಲ್ಯ ಹೆಚ್ಚಬಹುದೆಂಬ ಭೀತಿ ಹಾಗೂ ರಷ್ಯಾ ವಿರೋಧಿ ನಿಲುವೇ ಚೀನಾದ ಈ ಶಂಕೆಗೆ ಕಾರಣವೆನ್ನಲಾಗಿದೆ.

ವಿಯಟ್ನಾಂ ಶಾಂತಿ ಒಪ್ಪಂದಕ್ಕೆ ಪ್ಯಾರಿಸ್‌ನಲ್ಲಿ ಸಹಿ

ಪ್ಯಾರಿಸ್‌, ಜ. 27– ಅಮೆರಿಕ, ಉತ್ತರ ಮತ್ತು ದಕ್ಷಿಣ ವಿಯಟ್ನಾಂನ ತಾತ್ಕಾಲಿಕ ಕ್ರಾಂತಿಕಾರಿ ಸರ್ಕಾರಗಳ (ಪಿಆರ್‌ಜಿ) ವಿದೇಶಾಂಗ ಸಚಿವರುಗಳು ಇಂದು ಇಲ್ಲಿ ವಿಯಟ್ನಾಂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಆಹುತಿ ತೆಗೆದುಕೊಂಡಿರುವ ಸಮರವನ್ನು ಅಂತ್ಯ ಗೊಳಿಸುವ ಶಾಂತಿ ಒಪ್ಪಂದಕ್ಕೆ ಅಂತರರಾಷ್ಟ್ರೀಯ ಸಮ್ಮೇಳನದ ಭವ್ಯ ಭವನದಲ್ಲಿ ಮಧ್ಯಾಹ್ನ 3.36ಕ್ಕೆ (ಭಾರತೀಯ ಕಾಲಮಾನ) ಸಹಿ ಹಾಕಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು