ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಬುಧವಾರ, 29-11-1972

Last Updated 28 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಅಭಾವದ ಜಿಲ್ಲೆಗಳ ಸ್ಥಿತಿ ಅಧ್ಯಯನಕ್ಕೆ ಶಾಸಕರ ತಂಡ

ಬೆಂಗಳೂರು, ನವೆಂಬರ್‌ 28– ಘೋಷಣೆ, ದೂಷಣೆಗಳ ಗೊಂದಲದ ನಡುವೆ ವಿರೋಧ ಪಕ್ಷದ ಸದಸ್ಯರು ಯಶಸ್ವಿಯಾಗಿ ನಡೆಸಿದ ಧರಣಿ ಸತ್ಯಾಗ್ರಹವನ್ನನುಸರಿಸಿ, ಅಭಾವ ಪೀಡಿತ ಜಿಲ್ಲೆಗಳ ಖುದ್ದು ಅಧ್ಯಯನಕ್ಕಾಗಿ ಶಾಸಕರ ತಂಡವೊಂದನ್ನು ರಚಿಸಿ ಕಳುಹಿಸಲು, ಸರ್ಕಾರ ಇಂದು ವಿಧಾನಸಭೆಯಲ್ಲಿ ಒಪ್ಪಿಕೊಂಡಿತು.

ಕಲ್ಬುರ್ಗಿ, ಬೀದರ, ಬಿಜಾಪುರ, ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳ ಕಾಲ ಪ‍್ರವಾಸ ಮಾಡಿ, ಒಂದು ವಾರದಲ್ಲಿ ಚರ್ಚೆಗೆ ವರದಿ ಸಲ್ಲಿಸಲಿರುವ ಹತ್ತು ಮಂದಿ ಸದಸ್ಯರ ಸಮಿತಿಯನ್ನು ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ, ನಾಳೆ ಮುಖ್ಯಮಂತ್ರಿ ದೇವರಾಜ ಅರಸು ಅವರು ಪ್ರಕಟಿಸಲಿದ್ದಾರೆ.

ಭಾರತ–ಪಾಕಿಸ್ತಾನ್‌ ಮುಖ್ಯ ದಂಡನಾಯಕರ ಮಾತುಕತೆ ವಿಫಲ

ನವದೆಹಲಿ, ನವೆಂಬರ್‌ 28– ಶಿಮ್ಲಾ ಒಪ್ಪಂದದ ಜಾರಿಗೆ ತಡೆಯುಂಟು ಮಾಡಿರುವ ಠಾಕೂರ್‌ ಚೌಕ್‌ ಪ್ರಶ್ನೆಯನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ಪ್ರಧಾನ ದಂಡನಾಯಕರು ಇಂದು ವಿಫಲರಾಗಿ ಪ್ರಶ್ನೆಯನ್ನು ತಂತಮ್ಮ ಸರ್ಕಾರಗಳಿಗೆ ಮತ್ತೆ ಪರಿಶೀಲನೆಗೆ ಒಪ್ಪಿಸಲು ನಿರ್ಧರಿಸಿದರು.

ಲಾಹೋರಿನಲ್ಲಿ ನಡೆದ ಈ ಮಾತುಕತೆಗಳಿಗೆ ಹೋಗಿದ್ದ ಭಾರತದ ಪ್ರಧಾನ ದಂಡನಾಯಕ ಜನರಲ್‌ ಮಾಣೆಕ್‌ ಷಾ ಅವರು ಪಾಕಿಸ್ತಾನದ ಪ್ರಧಾನ ದಂಡನಾಯಕ ಜನರಲ್‌ ಟಿಕ್ಕಾಖಾನ್‌ರ ಜತೆ ಚರ್ಚೆ ನಡೆಸಿದ ನಂತರ ಸಂಜೆ ಆರಕ್ಕೆ ಮುಂಚೆಯೇ ದೆಹಲಿಗೆ ವಾಪಸ್‌ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT