ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಗುರುವಾರ, 30-11-1972

Last Updated 29 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಠಾಕೂರ್ ಚೌಕ ಪ್ರದೇಶ ಪಾಕ್ ಪಂಜಾಬಿನ ಭಾಗ ವಿವಾದಕ್ಕೆ ಹೊಸ ತಿರುವು

ರಾವಲ್ಪಿಂಡಿ, ನ. 29– ಕಾಶ್ಮೀರದಲ್ಲಿ ಹತೋಟಿ ರೇಖೆ ಗುರುತಿಸುವುದಕ್ಕೆ ಏಕೈಕ ಅಡ್ಡಿಯಾಗಿರುವ ಠಾಕೂರ್ ಚೌಕ ಪ್ರದೇಶವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಾಗವೆಂಬ ವಾದವನ್ನು ಪಾಕಿಸ್ತಾನ ಈಗ ಮಂಡಿಸುತ್ತಿರುವಂತೆ ಕಂಡು ಬರುತ್ತಿದ್ದು ಇದರಿಂದ ವಿವಾದಕ್ಕೆ ಹೊಸ ತಿರುವು ಉಂಟಾಗಿದೆ.

ಠಾಕೂರ್ ಚೌಕ ಪ್ರದೇಶದಿಂದ ಪಾಕಿಸ್ತಾನಿ ಸೈನಿಕರು ವಾಪಸಾಬೇಕೆಂಬುದು ಭಾರತದ ಸ್ಪಷ್ಟ ನಿಲುವಾಗಿದೆ.

ಹತೋಟಿ ರೇಖೆ ಗುರುತಿಸುವ ಸಂಬಂಧ ದಲ್ಲಿ ಉಂಟಾಗಿರುವ ವಿವಾದವನ್ನು ತಮ್ಮ ತಮ್ಮ ಸರ್ಕಾರಗಳ ಪರಿಶೀಲನೆಗೇ ಒಪ್ಪಿಸಲು ಭಾರತ ಹಾಗೂ ಪಾಕಿಸ್ತಾನ ದಂಡನಾಯಕರು ನಿರ್ಧರಿಸಿದ್ದು, ಸಿಮ್ಲಾ ಒಪ್ಪಂದ ಜಾರಿಗೆ ಬರುವುದು ಇನ್ನಷ್ಟು ನಿಧಾನವಾಗುವುದಕ್ಕೆ ಕಾರಣವಾಗಬಹುದೆಂದು ಇಲ್ಲಿನ ಅಧಿಕೃತ ವಲಯಗಳು ಭಾವಿಸಿವೆ.

ವಿದ್ಯಾರ್ಥಿ ಚಳವಳಿಕಾರರ ಮೇಲೆ ಲಾಠಿ: 27 ಮಂದಿಗೆ ಗಾಯ

ಹುಬ್ಬಳ್ಳಿ, ನ. 29– ವಿದ್ಯಾರ್ಥಿಗಳ ಚಳವಳಿಯ 3ನೇ ದಿನವಾದ ಇಂದು, ಇಲ್ಲಿನ ಜೆ.ಜಿ. ಕಾಮರ್ಸ್ ಕಾಲೇಜಿಗೆ ಸಮೀಪದ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಅಡ್ಡಗಟ್ಟಿದ ವಿದ್ಯಾರ್ಥಿ ಚಳವಳಿಕಾರರ ಮೇಲೆ ಪೊಲೀಸರು ಎರಡು ಬಾರಿ ಲಾಠಿ ಪ್ರಹಾರ ಮಾಡಿದರು.

ಲಾಠಿ ಪ್ರಹಾರದಿಂದ 20 ಮಂದಿ ವಿದ್ಯಾರ್ಥಿಗಳು ಮತ್ತು ಕಲ್ಲೆಸೆತದಿಂದ ಇಬ್ಬರು ಅಧಿಕಾರಿಗಳ ಸಹಿತ ಒಟ್ಟು 27 ಪೊಲೀಸರು ಗಾಯಗೊಂಡರು.

ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಶುಲ್ಕ ಇಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಚಳವಳಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT