ಶುಕ್ರವಾರ, ಮೇ 27, 2022
25 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಭಾನುವಾರ 2–4–1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಂತರಿಕ ಕಲಹವೇ ವಿರೋಧ ಪಕ್ಷಗಳ ಪರಾಭವಕ್ಕೆ ಕಾರಣ

ನವದೆಹಲಿ, ಏ. 1– ಕಮ್ಯುನಿಸ್ಟ್‌ ಪಕ್ಷದ ವಿನಾ ಉಳಿದೆಲ್ಲ ವಿರೋಧ ಪಕ್ಷಗಳೂ ಚುನಾವಣೆ ಫಲಿತಾಂಶದ ಬಗ್ಗೆ  ತೀವ್ರವಾಗಿ ಹತಾಶಗೊಂಡಿವೆ. ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಎಂದಿಗೂ ಸೋಲಿಸಲು ಸಾಧ್ಯವೇ ಇಲ್ಲ ಎಂಬುದು ಅವುಗಳ ಅಭಿಪ್ರಾಯ. ಎಲ್ಲಕ್ಕಿಂತ ಹೆಚ್ಚಾಗಿ, ವಿಧಾನಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿ ತಮ್ಮ ಪಕ್ಷಗಳ ಪ್ರಾತಿನಿಧ್ಯ ಹೆಚ್ಚುವ ಸಾಧ್ಯತೆಯೇ ಇಲ್ಲ ಎಂದು ಭಾವಿಸಿವೆ.

ಈ ಹತಾಶ ಸ್ಥಿತಿಯಲ್ಲಿರುವ ವಿರೋಧ ಪಕ್ಷಗಳು– ಅದರಲ್ಲೂ ಜನಸಂಘದ ವಕ್ತಾರರು, ‘ಈಚಿನ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿವೆಯೇ?’ ಎಂದು ಪ್ರಶ್ನಿಸಿವೆ.

ಏಪ್ರಿಲ್ ಫೂಲ್

ನವದೆಹಲಿ, ಏ. 1– ‘ಎರ್‌ ಇಂಡಿಯಾ ಮಹಾರಾಜರಿಗೂ’ ಇಂದು ‘ಏಪ್ರಿಲ್ ಫೂಲ್‌‘ ಬಿಸಿತಾಕಿತು.

ಪ್ರಯಾಣಕ್ಕೆ ಸಿದ್ಧವಾದ ವಿಮಾನದಲ್ಲಿ ಬಾಂಬ್ ಇರುವುದಾಗಿ ಇಂದು ದೆಹಲಿ ವಿಮಾನ ನಿಲ್ದಾಣದ ಏರ್ ಇಂಡಿಯಾ ಕಚೇರಿಗೆ ಯಾರೋ ಫೋನ್‌ ಮಾಡಿದರು.

ಮುಂಬೈ, ಢಾಕಾ, ನ್ಯೂಯಾರ್ಕ್ ಮತ್ತು ಲಂಡನ್‌ಗೆ ಹೊರಡಲಿದ್ದ 4 ವಿಮಾನಗಳಲ್ಲಿ ಕೂಡಲೇ ಶೋಧನೆ ಆರಂಭಿಸಲಾಯಿತು. ಆದರೆ ಯಾವುದೇ ಬಾಂಬ್ ಸಿಗಲಿಲ್ಲ. ಪರಿಣಾಮವಾಗಿ ವಿಮಾನಗಳು ಹೊರಡುವುದು 2 ಗಂಟೆ ತಡವಾಯಿತು.

‘ಇಂದು ಏಪ್ರಿಲ್ ಒಂದನೇ ತಾರೀಕು’ ಎಂದು ಆನಂತರ ವಿಮಾನ ಸಂಸ್ಥೆ ವಕ್ತಾರರೊಬ್ಬರು ನಿಟ್ಟುಸಿರುಬಿಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು