ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಗುರುವಾರ, 28–1–1971

Last Updated 27 ಜನವರಿ 2021, 19:30 IST
ಅಕ್ಷರ ಗಾತ್ರ

ಭೂಮಿಸೇನೆ ಯೋಜನೆ ಜಾರಿಗೆ ಮಂಡಳಿ ರಚನೆ

ಬೆಂಗಳೂರು, ಜ. 27– ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದ ನಿರುದ್ಯೋಗಿ ಜನರಿಗೆ ಉದ್ಯೋಗ ದೊರಕಿಸಲು ರಾಜ್ಯ ಸರ್ಕಾರ ಕೈಗೊಳ್ಳಲಿರುವ ‘ಭೂಮಿಸೇನೆ’ ಯೋಜನೆ ಕಾರ್ಯಗತ ಮಾಡಲು ಮಂಡಳಿಯೊಂದನ್ನು ರಚಿಸಲಾಗುವುದು.

ನಿರುದ್ಯೋಗಿಗಳಾಗಿದ್ದು ಕೆಲಸ ಮಾಡಲೊಪ್ಪುವವರಿಗೆ ಉದ್ಯೋಗ ಒದಗಿಸಲು ‘ಭೂಮಿಸೇನೆ’ ಯೋಜನೆ ನಿರ್ಮಿಸುವ ತತ್ವಕ್ಕೆ ಮಂತ್ರಿಮಂಡಲ ಇಂದು ಒಪ್ಪಿಗೆ ನೀಡಿತು.

ನಿವೃತ್ತ ಸೇನಾಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ ಮಂಡಳಿಯೊಂದನ್ನು ರಚಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಮಂಡಳಿಯ ಸದಸ್ಯರಾಗಿರುವರು.

ಹತ್ತು ಎಕರೆವರೆಗೆ ಖುಷ್ಕಿ ಭೂಮಿ ಮೇಲಿನ ಕಂದಾಯ ರದ್ದು

ಬೆಂಗಳೂರು, ಜ. 27– ಹತ್ತು ಎಕರೆ ಅಥವಾ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಖುಷ್ಕಿ ಜಮೀನಿಗೆ, ಎರಡು ಎಕರೆವರೆಗೆ ತರಿ ಜಮೀನಿಗೆ
ಮತ್ತು ಒಂದು ಎಕರೆ ಬಾಗಾಯತು ಜಮೀನಿಗೆ ಭೂಕಂದಾಯ ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಂತ್ರಿಮಂಡಲ ಇಂದು ಕೈಗೊಂಡ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು, ಇದು ‘ಕಂದಾಯ ವರ್ಷ’ ಆರಂಭದ ದಿನವಾದ 1971ನೇ ಜುಲೈ 1ರಿಂದ ಜಾರಿಗೆ ಬರುವುದೆಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT