ಪ್ರಣಾಳಿಕೆ: ವ್ಯಾಪಕ ಆರ್ಥಿಕ–ಸಾಮಾಜಿಕ ಸುಧಾರಣೆಗಳ ಭರವಸೆ

ನವದೆಹಲಿ, ಜ. 24– ವ್ಯಾಪಕವಾದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಗಳನ್ನು ಮಾಡುವುದಾಗಿ ಆಡಳಿತ ಕಾಂಗ್ರೆಸ್ ಪಕ್ಷವು ರಾಷ್ಟ್ರದ ಮತದಾರರಿಗೆ ಆಶ್ವಾಸನೆ ನೀಡಿದೆ.

ನ್ಯಾಯಾಲಯದ ಇತ್ತೀಚಿನ ತೀರ್ಪುಗಳ ರೂಪದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಕ್ರಮಗಳಿಗೆ ಉಂಟಾಗಿರುವ ಅಡಚಣೆಗಳ ನಿವಾರಣೆಗೆ ಅಗತ್ಯವಾದ ‘ಸಂವಿಧಾನಾತ್ಮಕ ಪರಿಹಾರ ಕ್ರಮಗಳನ್ನೂ’ ಕೈಗೊಳ್ಳುವುದಾಗಿ ಭರವಸೆಯಿತ್ತಿದೆ.

ಇಂದು ಇಲ್ಲಿ ಬಿಡುಗಡೆ ಮಾಡಲಾದ ಹನ್ನೆರಡು ಅಂಶಗಳ ಆಡಳಿತ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಈ
ಭರವಸೆಗಳನ್ನು ನೀಡಲಾಗಿದೆ.

ಗೂಢಚರ್ಯೆ ಆರೋಪ: ಭಾರತದಿಂದ ಪಾಕ್ ಅಧಿಕಾರಿ ಉಚ್ಚಾಟನೆ

ನವದೆಹಲಿ, ಜ. 24– ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ನಿನ ಪ್ರಥಮ ಕಾರ್ಯ ದರ್ಶಿ ಜಾಫರ್ ಇಕ್ಬಾಲ್ ರಾಥೋಡ್ ಅವರನ್ನು ಅನಪೇಕ್ಷಿತ ವ್ಯಕ್ತಿ ಎಂದು ಕೇಂದ್ರ ಸರ್ಕಾರವು ಇಂದು ಘೋಷಿಸಿ, ಅವರು ನಲವತ್ತೆಂಟು ಗಂಟೆಗಳಲ್ಲಿ ಭಾರತವನ್ನು ಬಿಡಬೇಕೆಂದು ಆಜ್ಞೆ ಮಾಡಿದೆ.

ಜಮ್ಮು ಕಾಶ್ಮೀರದಲ್ಲಿ ಗುಪ್ತ ಅಲ್ಫತಾ ಸಂಸ್ಥೆಯ ವ್ಯವಸ್ಥೆ ಮತ್ತು ನಿರ್ದೇಶನದಲ್ಲಿ ರಾಥೋಡ್ ಸಕ್ರಿಯ ಪಾತ್ರ ವಹಿಸಿದ್ದರಲ್ಲದೆ ವಿಧ್ವಂಸಕ ಚಟುವಟಿಕೆಗಳಿಗೆ ನೆರವಾಗಿ ಗೂಢಚರ್ಯೆ ನಡೆಸುತ್ತಿದ್ದರೆಂದು ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.