ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ 10.5.1972

Last Updated 9 ಮೇ 2022, 22:30 IST
ಅಕ್ಷರ ಗಾತ್ರ

ಕಾರ್ಪೊರೇಷನ್ ಕಾಮಗಾರಿ ಅಕ್ರಮ: 6 ಜನ ಎಂಜಿನಿಯರುಗಳ ಸಸ್ಪೆಂಡ್

ಬೆಂಗಳೂರು, ಮೇ 9– ಕಾರ್ಪೊರೇಷನ್ನಿನಲ್ಲಿ ಮಂಜೂರಾದ 2.84 ಕೋಟಿ ರೂಪಾಯಿ ಖರ್ಚಿನ ಕಾಮಗಾರಿಗಳಲ್ಲಿ ನಡೆದಿದೆಯೆನ್ನ ಲಾದ ಅಕ್ರಮಗಳ ಸಂಬಂಧದಲ್ಲಿ ಕಾರ್ಪೊರೇಷನ್ನಿನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸೂಪರಿಂಟೆಂಡಿಂಗ್ ಎಂಜಿನಿಯರ್ ಮತ್ತು ಐದು ಮಂದಿ ಎಕ್ಸಿಕ್ಯುಟಿವ್ ಎಂಜಿನಿಯರುಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಎಂಜಿನಿಯರುಗಳನ್ನು ಕಾರ್ಪೊರೇಷನ್ನಿ ನಿಂದ ಇಲಾಖೆಗೆ ವಾಪಸು ಕರೆಸಿ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು.

ನಗರದ ಚಿತ್ರ ಹಂಚಿಕೆದಾರರ ನಿವಾಸ ಶೋಧನೆ

ಬೆಂಗಳೂರು, ಮೇ 9– ಇಂದು ನಗರದಲ್ಲಿರುವ ಕೆಲವು ಚಲನಚಿತ್ರ ಹಂಚಿಕೆದಾರರ ನಿವಾಸ ಹಾಗೂ ಕಚೇರಿಗಳ ಮೇಲೆ ವರಮಾನ ತೆರಿಗೆ ಇಲಾಖೆ ಕಮಿಷನರ್ಶ್ರೀ ಕೆ. ರಾಮರಾವ್ ಮತ್ತಿತರ ಅಧಿಕಾರಿಗಳು ದಾಳಿ ನಡೆಸಿದರು.

ಚಲನಚಿತ್ರ ಹಂಚಿಕೆದಾರರೇ ಅಲ್ಲದೆ ಒಂದೆರಡು ಭಾರಿ ವ್ಯಾಪಾರಿಗಳ ಕಚೇರಿಗಳ ಮೇಲೂ ದಾಳಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT