ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, ಮೇ 23, 1972

Last Updated 23 ಮೇ 2022, 15:43 IST
ಅಕ್ಷರ ಗಾತ್ರ

ಮುಖ್ಯಮಂತ್ರಿಗಳ ಸಂಧಾನಕ್ಕೆ ಗಡಿನಾಡು ಕನ್ನಡಿಗರ ವಿರೋಧ
ಬೆಂಗಳೂರು, ಮೇ 22–
ಗಡಿ ಸಮಸ್ಯೆ ಪರಿಹಾರ ಪ್ರಶ್ನೆಯನ್ನು ಉಭಯ ಮುಖ್ಯಮಂತ್ರಿಗಳ ಸಮಾಲೋಚನೆಗೆ ಬಿಡುವ ಈಚಿನ ಕೇಂದ್ರದ ನಿಲುವನ್ನು ಉಗ್ರವಾಗಿ ವಿರೋಧಿಸಿರುವ ಗಡಿನಾಡು ಕನ್ನಡಿಗರ ಸಮ್ಮೇಳನವು, ‘ಮಹಾಜನ್‌ ವರದಿಯೇ ಏಕಮಾತ್ರ ಪರಿಹಾರ’ ಎಂದು ಕೇಂದ್ರಕ್ಕೂ ರಾಜ್ಯಕ್ಕೂ ಸ್ಪಷ್ಟಪಡಿಸಿದೆ.

ನಗರದಲ್ಲಿ ಇಂದು ಮುಕ್ತಾಯಗೊಂಡ ಎರಡು ದಿನಗಳ ಸಮ್ಮೇಳನವು ‘ಮಹಾಜನ್‌ ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡು, ಜಾರಿಗೆ ತರಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು’ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದೆ.

ಹುಣಸೂರು ಕ್ಷೇತ್ರ: ದೇವರಾಜ ಅರಸು ವಿರುದ್ಧ ನಾಲ್ವರ ಸ್ಪರ್ಧೆ
ಹುಣಸೂರು, ಮೇ 22–
ಹುಣಸೂರು ಕ್ಷೇತ್ರದಿಂದ ಜೂನ್‌ 12ರಂದು ರಾಜ್ಯದ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ನಾಲ್ವರು ಸ್ಪರ್ಧಿಗಳನ್ನು ಎದುರಿಸಲಿದ್ದಾರೆ.

ನಾಪಮತ್ರ ವಾಪಾಸು ಪಡೆದ ನಂತರ ಸ್ಪರ್ಧೆಯಿಂದ ಅಂತಿಮವಾಗಿ ಉಳಿದಿರುವ ಐದು ಮಂದಿಯ ಪಟ್ಟಿ ಈ ರೀತಿ ಇದೆ: ಶ್ರೀ ಜಿ. ರಂಗಸ್ವಾಮಿ ಬೆಂಗಳೂರು (ಹೊಟ್ಟೆ ಪಕ್ಷ), ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು (ಆಡಳಿತ ಕಾಂಗ್ರೆಸ್‌) , ಶ್ರೀ ಜಿ. ಕೆ.ಮಲಯ್ಯ ಬೆಂಗಳೂರು (ಯಂಗ್‌ ಟರ್ಕ್‌ ಕಾಂಗ್ರೆಸ್‌), ಶ್ರೀ ಎಂ.ಎಸ್‌. ಸಿದ್ದಪ್ಪ (ಪಕ್ಷೇತರ) ಮಂಡ್ಯ, ಶ್ರೀ ರಾಮಕೃಷ್ಣ ಭಾಗವತರ್‌ (ಪಕ್ಷೇತರ) ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT