ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಅಕ್ರಮವಾಗಿ ಧಾನ್ಯ ಬಚ್ಚಿಟ್ಟಿರುವ ಜಮೀನ್ದಾರರ ವಿರುದ್ಧ ಕ್ರಮ

Last Updated 11 ಆಗಸ್ಟ್ 2022, 22:15 IST
ಅಕ್ಷರ ಗಾತ್ರ

ಅಕ್ರಮವಾಗಿ ಧಾನ್ಯ ಬಚ್ಚಿಟ್ಟಿರುವ ಜಮೀನ್ದಾರರು, ವರ್ತಕರ ಬಗ್ಗೆ ಕ್ರಮ

ಕಲ್ಬುರ್ಗಿ, ಆಗ‌ಸ್ಟ್‌ 11– ರಾಜ್ಯದ ಅಭಾವಪೀಡಿತ ಪ್ರದೇಶಗಳಲ್ಲಿ ಅಕ್ರಮವಾಗಿ ನೂರಾರು ಕ್ವಿಂಟಲ್‌ ಗಳಷ್ಟು ಧಾನ್ಯವನ್ನು ಸಂಗ್ರಹಿಸಿಟ್ಟಿರುವ ಜಮೀನ್ದಾರರು ಹಾಗೂ ವರ್ತಕರ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು ರಹಸ್ಯವಾಗಿ ಸಿದ್ಧ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.‌

ಅಭಾವಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಲ್ಲಿ, ಆ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ರೂಪಿಸುತ್ತಿರುವ ಸಮಗ್ರ ಕಾರ್ಯಕ್ರಮದ ಅಂಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಪ್ರಧಾನಿ ಜತೆ ಅರಸು ಚರ್ಚೆ

ನವದೆಹಲಿ, ಆಗಸ್ಟ್‌ 11– ಮೈಸೂರು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿ, ರಾಜ್ಯದ ವಿವಿಧ ಸಮಸ್ಯೆಗ ಕುರಿತು ವಿಚಾರ ವಿನಿಮಯ ನಡೆಸಿದರು.

ಕೈಗಾರಿಕಾಭಿವೃದ್ಧಿ ಸಚಿವ ಸುಬ್ರಹ್ಮಣ್ಯಂ, ಸಚಿವ ಟಿ.ಎ. ಪೈ ಮತ್ತು ಸಚಿವ ಕೆ.ಸಿ. ಪಂತ್‌ ಅವರುಗಳನ್ನು ಅರಸು ಭೇಟಿ ಮಾಡಿದರು.

ಪ್ರಧಾನಿ ಜತೆ ಚರ್ಚಿಸಲಾದ ಇನ್ನೊಂದು ಅಂಶವೆಂದರೆ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಡಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರ. ಈ ಬಗೆಗೆ, ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕೃತವಾಗಿದ್ದು, ಅದಕ್ಕೆ ಸಂಸತ್ತಿನ ಮುದ್ರೆ ಬೀಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT