ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: 54 ಎಕರೆಗಿಂತ ಹೆಚ್ಚು ಭೂ ಹಿಡುವಳಿ ಮಿತಿ; ಕೇಂದ್ರದಿಂದ ಸೂಚನೆ

Last Updated 16 ಆಗಸ್ಟ್ 2022, 19:37 IST
ಅಕ್ಷರ ಗಾತ್ರ

54 ಎಕರೆಗಿಂತ ಹೆಚ್ಚು ಭೂ ಹಿಡುವಳಿ ಮಿತಿ; ಕೇಂದ್ರದಿಂದ ಸೂಚನೆ
ಬೆಂಗಳೂರು, ಆ. 16–
ಮರಳುಗಾಡು, ಬೆಟ್ಟ–ಗುಡ್ಡ ಪ್ರದೇಶ ಮತ್ತು ಪದೇಪದೇ ಕ್ಷಾಮಪೀಡಿತವಾಗುವ ಪ್ರದೇಶಗಳಲ್ಲಿ ಜಮೀನು ಹಿಡುವಳಿ ಮಿತಿಯನ್ನು 54 ಎಕರೆಗಳಿಗಿಂತ ಹೆಚ್ಚಾಗಿಸಬೇಕೆಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

‘ಭೂ ಮಾಲೀಕರಿಂದ ಭೂಮಿ ಪಡೆದು ಭೂಮಿ ಇಲ್ಲದ ನತದೃಷ್ಟ ರೈತರಿಗೆ ಅದನ್ನು ಹಂಚುವ ಚರಿತ್ರಾರ್ಹ ಭೂ ಸುಧಾರಣಾ ಮಸೂದೆ’ಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದ ಕಂದಾಯ ಸಚಿವ ಶ್ರೀ ಎನ್‌. ಹುಚ್ಚಮಾಸ್ತಿಗೌಡರು ಈ ವಿಚಾರವನ್ನು ತಿಳಿಸಿದರು.

ಮಸೂದೆಯನ್ನು ಜನಮತಗಣನೆಗಾಗಿ ಕಳುಹಿಸಬೇಕೆಂದು ಪಕ್ಷೇತರ ಸದಸ್ಯಶ್ರೀ ಟಿ. ಆರ್‌. ಶಾಮಣ್ಣನವರು ತಿದ್ದುಪಡಿ ಮಂಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಆದ್ಯತೆ ನೀಡಲು ಅರಸು ಷರತ್ತು
ಬೆಂಗಳೂರು, ಆ. 16–
ರಸ್ತೆ, ಕಟ್ಟಡ ಮತ್ತು ಸೇತುವೆ ಕಾಮಗಾರಿಗಳನ್ನು ನಿಲ್ಲಿಸಿ ಅವುಗಳ ಹಣವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಳಸಲು ವಿಧಾನಸಭೆ ಒಪ್ಪುವುದಾದರೆ ಆ ಸಂಬಂಧದಲ್ಲಿ ತಾವು ಒಂದು ನಿರ್ಣಯ ಮಂಡಿಸಲು ಸಿದ್ಧವೆಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.

ಶ್ರೀ ಮಲ್ಲಿಕಾರ್ಜುನ ಖರ್ಗೆ (ಕಾಂ) ಮತ್ತು ಶ್ರೀ ಡಿ.ಬಿ. ಕಲಮಣಕರ್‌ (ಕಾಂ) ಅವರ ಪ್ರಶ್ನೆಗಳಿಗೆ ಅರಸು ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT