ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಶನಿವಾರ, 19–8–1972

Last Updated 18 ಆಗಸ್ಟ್ 2022, 21:22 IST
ಅಕ್ಷರ ಗಾತ್ರ

*ಪಂಚಾಯಿತಿಗೊಂದುನ್ಯಾಯಬೆಲೆ ಅಂಗಡಿ
ಬೆಂಗಳೂರು, ಆಗಸ್ಟ್‌ 18–
ಪಂಚಾಯಿತಿ ಗೊಂದು ನ್ಯಾಯಬೆಲೆ ಅಂಗಡಿ; ಗ್ರಾಮದಲ್ಲಿ ಕನಿಷ್ಠ 20 ಕ್ವಿಂಟಲ್‌ ಧಾನ್ಯ ದಾಸ್ತಾನು; ತಾಲ್ಲೂಕು ಕೇಂದ್ರಗಳಲ್ಲಿ ಕನಿಷ್ಠ 200 ಕ್ವಿಂಟಲ್‌ ಧಾನ್ಯ ಶೇಖರಣೆ– ಇವು ಅಭಾವ ಪೀಡಿತ ಪ್ರದೇಶಗಳ ಆಹಾರ ಅಭಾವನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು.

ಈ ಉದ್ದೇಶಕ್ಕೆ ಅನುಗುಣವಾಗಿಮೂರು ತಿಂಗಳುಗಳ ಅವಧಿಯಲ್ಲಿ ಹುಬ್ಬಳ್ಳಿ, ರಾಯಚೂರು, ಗುಲ್ಬರ್ಗ, ಬಳ್ಳಾರಿ ಹಾಗೂ ಬೆಂಗಳೂರುಗಳಲ್ಲಿ ಧಾನ್ಯ ದಾಸ್ತಾನಿಡಲು, ಆಹಾರ ಕಾರ್ಪೊರೇಷನ್‌ನಿಂದ ಒಂದುಲಕ್ಷ ಟನ್‌ಗಳಷ್ಟು ಗೋಧಿ ಕೇಳಲಾಗಿದೆ ಎಂದು ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

* ರಾಜ್ಯದಲ್ಲಿ ಅಭಾವ ಸ್ಥಿತಿ ವಿಷಮ: ಅರಸು
ಬೆಂಗಳೂರು, ಆಗಸ್ಟ್‌ 18
– ಕಳೆದ ಹದಿನೈದು ದಿನಗಳಿಂದೀಚೆಗೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಅಭಾವ ಪರಿಸ್ಥಿತಿ ವಿಷಮಿಸಿದೆ ಎಂದು ವಿಧಾನಸಭೆಗೆ ಇಂದು ತಿಳಿಸಿದ ಮುಖ್ಯಮಂತ್ರಿ ದೇವರಾಜ ಅರಸು ಅವರು, ಈ ಹೊಸ ಬೆಳವಣಿಗೆಯ ಅಗತ್ಯಕ್ಕೆ ಅನುಗುಣವಾಗಿ ಪರಿಹಾರ ಯೋಜನೆಗಳಿಗಾಗಿ ₹16.5ಕೋಟಿಗಳ ಪರಿಷ್ಕೃತ ಬೇಡಿಕೆಯನ್ನು ಕೇಂದ್ರದ ಮುಂದಿಡಲಾಗಿದೆ ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT