ಗುರುವಾರ , ಮಾರ್ಚ್ 23, 2023
21 °C
50 ವರ್ಷಗಳ ಹಿಂದೆ

50 ವರ್ಷಗಳ ಹಿಂದೆ: ಗುರುವಾರ 4–11–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಪಾಕ್ ವಿಮಾನಗಳಿಂದ ಪಂಜಾಬಿನ ಸಮೀಪ ಗಡಿಯ ಉಲ್ಲಂಘನೆ

ನವದೆಹಲಿ, ನ. 3– ಮಂಗಳವಾರ ಮಧ್ಯಾಹ್ನ ನಾಲ್ಕು ಪಾಕಿಸ್ತಾನಿ ಜೆಟ್ ಫೈಟರ್ ವಿಮಾನಗಳು ಭಾರತದ ಮೇಲೆ ಅತಿಕ್ರಮಿಸಿ ಹಾರಾಟ ನಡೆಸಿದುದರ ವಿರುದ್ಧ ಭಾರತವು ಪಾಕಿಸ್ತಾನಕ್ಕೆ ಇಂದು ಉಗ್ರ ಪ್ರತಿಭಟನೆ ಸಲ್ಲಿಸಿದೆ.

ಭಾರತದ ವಾಯು ಪ್ರದೇಶದಲ್ಲಿ ಪಾಕಿಸ್ತಾನಿ ವಿಮಾನಗಳು ಗೋಚರಿಸಿದ ಕೂಡಲೇ ಭಾರತೀಯ ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿ ಅತಿಕ್ರಮಿಸಿ ಬಂದ ವಿಮಾನಗಳನ್ನು ವಾಪಸು ಅಟ್ಟಿದವು. ಪಾಕಿಸ್ತಾನವು ಭಾರತದ ಗಡಿಯಲ್ಲಿ ಸೇನೆಯನ್ನು ಸಂಗ್ರಹಿಸಿದ ಬಳಿಕ ಭಾರತದ ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿದುದು ಇದೇ ಮೊದಲು.

ರಾಜ್ಯಕ್ಕೊಂದು ಆರ್ಥಿಕ ಬೆಳವಣಿಗೆ ಸಂಸ್ಥೆ ಸ್ಥಾಪನೆ

ಬೆಂಗಳೂರು, ನ. 3– ರಾಜ್ಯದಲ್ಲಿ ಆರ್ಥಿಕ ಪ್ರಗತಿ ಸಾಧನೆಗಾಗಿ ತಜ್ಞರ ಸಲಹೆಯನ್ನು ಒದಗಿಸಲು ಆರ್ಥಿಕ ಬೆಳವಣಿಗೆ ಸಂಸ್ಥೆಯೊಂದನ್ನು ಸ್ಥಾಪಿಸಲು ಸರ್ಕಾರ ಯೋಚಿಸಿದೆ.

ವಿಶ್ವವಿಖ್ಯಾತಿ ಪಡೆದಿರುವ ದೆಹಲಿಯಲ್ಲಿರುವ ಅರ್ಥಶಾಸ್ತ್ರ ಶಾಲೆ ಹಾಗೂ ಆರ್ಥಿಕ ಬೆಳವಣಿಗೆ ಸಂಸ್ಥೆಯ ಮಾದರಿಯಲ್ಲಿ ಇಲ್ಲಿನ ಸಂಸ್ಥೆಯನ್ನು ರೂಪಿಸಲಾಗುವುದು. ರಿಜಿಸ್ಟರ್ ಆದ ಸೊಸೈಟಿಯೊಂದು ಈ ಸಂಸ್ಥೆಯನ್ನು ನಿರ್ವಹಿಸುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು