ಗುರುವಾರ , ಮಾರ್ಚ್ 23, 2023
20 °C

50 ವರ್ಷಗಳ ಹಿಂದೆ: ಸೋಮವಾರ 8–11–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ– ಪಾಕ್‌ ನೇರ ಸಮಾಲೋಚನೆಗೆ ಚೀನಾದ ಮನವಿ

ಪೀಕಿಂಗ್‌, ನ. 7– ಗಡಿಯಲ್ಲಿನ ಪ್ರಕ್ಷುಬ್ಧತೆಯನ್ನು ಕಡಿಮೆ ಮಾಡಿಕೊಳ್ಳಲು ಪರಸ್ಪರ ಸಂಧಾನ, ಸಮಾಲೋಚನೆ ನಡೆಸಿಕೊಳ್ಳಬೇಕೆಂದು ಚೀನಾವು ಇಂದು ಭಾರತ ಮತ್ತು ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿತು.

ಪೂರ್ವ ಬಂಗಾಳದ ಸಮಸ್ಯೆಗೆ ನ್ಯಾಯಪೂರ್ಣ ಇತ್ಯರ್ಥವೊಂದನ್ನು ಕಂಡುಕೊಳ್ಳಬೆಕೆಂದೂ ಚೀನಾವು ಪಾಕಿಸ್ತಾನಕ್ಕೆ ಸೂಚಿಸಿದೆ.

ಯಾವುದೇ ತುರ್ತುಸ್ಥಿತಿಗೆ ಸನ್ನದ್ಧವಾಗಿರಲು ಕರೆ

ಬೆಂಗಳೂರು, ನ. 7– ‘ದೇಶದ ಪೂರ್ವ ಗಡಿಯಲ್ಲಿ ಪಾಕಿಸ್ತಾನದಿಂದ ಬಾರಿ ಷೇಲ್‌ದಾಳಿ ನಡೆಯುತ್ತಿದೆ’ ಎಂದು ಇಲ್ಲಿ ತಿಳಿಸಿದ ಕೇಂದ್ರ ಸಚಿವ ಕೆ.ಸಿ. ಪಂತ್‌ ಅವರು, ‘ಯಾವುದೇ ತುರ್ತು ಸನ್ನಿವೇಶವನ್ನು ಎದುರಿಸಲು ದೇಶ ಸಿದ್ಧವಿರಬೇಕು’ ಎಂದು ಹೇಳಿದರು.

ಯಹ್ಯಾಖಾನರ ಯುದ್ಧೋನ್ಮಾದದ ಕೂಗುಗಳನ್ನು ಮಧ್ಯಾಹ್ನ ಆಡಳಿತ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಸ್ತಾಪಿಸಿದ ಪಂತ್‌ ಅವರು, ‘ನಮಗೆ ಸಮರಬೇಕಿಲ್ಲ. ಆದರೆ ದೇಶದ ಸಮಗ್ರತೆಗೆ ಅಪಾಯತಟ್ಟುವುದಾರೆ, ವಾಪಾಸು ಕೊಡುವ ನಾವು ಸಿದ್ಧರಿದ್ದೇವೆ’ ಎಂದರು.

‘ಜನತೆಯಲ್ಲಿ ಸದಾಸಿದ್ಧತೆಯ ಲವಲವಿಕೆ ಇರಬೇಕು. ಇದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ಶ್ರಮಿಸಬೇಕು. ಯುದ್ಧ ಪ್ರಸಂಗ ಬಂದರೆ, ದೇಶದಲ್ಲಿ ಕೋಮು ಸೌಹಾರ್ದ ಕಾಪಾಡುವ ಕೆಲಸ ಪ್ರತಿಯೊಬ್ಬರ ಆದ್ಯ ಹೊಣೆಯಾಗಿರಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು