ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ನಗರ ಕೊಳಚೆ ಪ್ರದೇಶ ನಿರ್ಮೂಲನಗೆ ಹೆಚ್ಚುವರಿ ಧನಸಹಾಯ

Last Updated 19 ಅಕ್ಟೋಬರ್ 2022, 23:15 IST
ಅಕ್ಷರ ಗಾತ್ರ

ನಗರ ಕೊಳಚೆ ಪ್ರದೇಶ ನಿರ್ಮೂಲನ ಕಾರ್ಯಕ್ರಮಕ್ಕೆ ಹೆಚ್ಚುವರಿ ಧನಸಹಾಯ

ನವದೆಹಲಿ, ಅ. 19– ಯೋಜನಾ ಆಯೋಗದ ಹೆಚ್ಚುವರಿ ಧನಸಹಾಯದಿಂದ 1972–73ನೇ ಸಾಲಿನ ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ವೆಚ್ಚದ ಬೆಂಗಳೂರು ನಗರ ಕೊಳಚೆ ಪ್ರದೇಶ ನಿರ್ಮೂಲನೆ ಕಾರ್ಯಕ್ರಮ ಜಾರಿಗೆ ಬರಲಿದೆ.

ಕನಿಷ್ಠಪಕ್ಷ ಪ್ರತೀ ರಾಜ್ಯದ ಒಂದು ಪ್ರಮುಖ ನಗರವನ್ನು ಕೊಳಚೆ ಪ್ರದೇಶ ಪರಿಸರ ಸುಧಾರಣೆ ಕಾರ್ಯಕ್ರಮದ ವ್ಯಾಪ್ತಿಗೊಳಪಡಿಸಲು ಯೋಜನಾ ಆಯೋಗ ಒಪ್ಪಿದ್ದು, ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ ಎರಡು ಕೋಟಿ ರೂಪಾಯಿ ಹೆಚ್ಚುವರಿ ಹಣ ಒದಗಿಸಲಾಗಿದೆ.

ಕೇಂದ್ರ ವಸತಿ ಮತ್ತು ಕಾಮಗಾರಿ ಶಾಖೆ ಸಚಿವ ಉಮಾಶಂಕರ ದೀಕ್ಷಿತ್‌ ಅವರು ಇಂದು ತಮ್ಮ ಶಾಖೆಯ ಸಮಾಲೋಚನಾ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಬಾಂಗ್ಲಾ ದೇಶಕ್ಕೆ ಯುನೆಸ್ಕೊ ಸದಸ್ಯತ್ವ

ಪ್ಯಾರಿಸ್‌, ಅ. 19– ಬಾಂಗ್ಲಾದೇಶ ಇಂದು ಯುನೆಸ್ಕೊ ಸದಸ್ಯತ್ವ ಪಡೆಯಿತು. ಇಂದು ಇಲ್ಲಿ ಸಮಾವೇಶಗೊಂಡಿದ್ದ ಯುನೆಸ್ಕೊ ಜನರಲ್‌ ಅಸೆಂಬ್ಲಿ ಹದಿನೇಳನೇ ಅಧಿವೇಶನ 84–22 ಮತಗಳಿಂದ ಬಾಂಗ್ಲಾದೇಶವನ್ನು ಸೇರಿಸಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿತು. ಆರು ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT