ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, 21.10.1972

Last Updated 20 ಅಕ್ಟೋಬರ್ 2022, 23:00 IST
ಅಕ್ಷರ ಗಾತ್ರ

ಐದನೇ ಯೋಜನೆ: ಗ್ರಾಮಾಂತರ ಜನತೆಯ ಕ್ಷೇಮಾಭಿವೃದ್ಧಿಗೆ ಹೆಚ್ಚು ಗಮನ: ಸಚಿವ ಅಹ್ಮದ್‌

ನವದೆಹಲಿ, ಅ. 20– ಐದನೇ ಪಂಚವಾರ್ಷಿಕ ಯೋಜನೆಯು ಕೇವಲ ಉತ್ಪನ್ನ ನಿರ್ದೇಶಿತವಾಗಿರದೆ ಗ್ರಾಮಾಂತರ ಜನ ಸಮುದಾಯದ ಕ್ಷೇಮಾಭ್ಯುದಯದತ್ತ ಹೊಸ ಗಮನ ನೀಡುವುದೆಂದು ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್‌ ಅಲೀ ಅಹ್ಮದ್‌ ಇಂದು ಇಲ್ಲಿ ಹೇಳಿದರು.

ಸಾಮಾಜಿಕ ಬದಲಾವಣೆ ಕುರಿತ ಸಂಸ್ಥೆ ಏರ್ಪಡಿಸಿದ್ದ ಹಸಿರುಕ್ರಾಂತಿ ಕುರಿತ ವಿಚಾರಗೋಷ್ಠಿಯೊಂದನ್ನು ಉದ್ಘಾಟಿಸಿದ ಅವರು ಮುಂದಿನ ಐದು ವರ್ಷಗಳಿಗೆ ಸಮಗ್ರ ಕೃಷಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

₹800 ಬೆಲೆ ಎತ್ತು ₹25ಕ್ಕೆ ಮಾರಾಟ!

ಬೆಂಗಳೂರು, ಅ.20– ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಲ್ಲದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಕೆಲಸ ಇಲ್ಲದೆ ಜನ
ನೆರೆರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆಂದೂ, ಪರಿಹಾರ ಕಾರ್ಯವನ್ನು ನಿಧಾನಗೊಳಿಸಲಾಗಿದೆ ಎಂದೂ ವಿಧಾನಸಭಾ ಸದಸ್ಯ ಶ್ರೀ ಪ್ರಭಾಕರ್‌ ತೇಳ್ಕರ್‌ ತಿಳಿಸಿದ್ದಾರೆ.

ಶ್ರೀಯುತರು ನೀಡಿರುವ ಹೇಳಿಕೆಯಲ್ಲಿ ಭೂಸಾರ ರಕ್ಷಣೆಯನ್ನು ಕಲಬುರಗಿ ಜಿಲ್ಲೆ ಅದರಲ್ಲಿಯೂ ಕಲಗಿ ಕ್ಷೇತ್ರದಲ್ಲಿ ಕೈಗೊಳ್ಳ
ದಿದ್ದರೆ ಜನ ಗ್ರಾಮಗಳಲ್ಲಿ ಉಳಿಯದಿರಬಹುದು ಎಂದೂ, ಆದುದರಿಂದ ಭೂಸಾರ ರಕ್ಷಣೆ ಕಾರ್ಯವನ್ನು ಕೈಗೊಳ್ಳಬೇಕೆಂದೂ ಒತ್ತಾಯಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT