ಬೇಜವಾಬ್ದಾರಿಯ ಕ್ರಮ

ಭಾರತ ತನ್ನ ನೆರೆಯ ರಾಷ್ಟ್ರಗಳೊಡನೆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮಧುರ ಬಾಂಧವ್ಯ ಬೆಳೆಸಲು ವಿಶೇಷ ಪ್ರಯತ್ನ ಪಡುತ್ತಿರುವ ಸಮಯದಲ್ಲಿಯೇ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಯನ್ನು ಬೆಳೆಸಲು ಕೆಲವು ಮಂದಿ ನಾಯಕರು ನಿದ್ದೆಗೆಟ್ಟು ಶ್ರಮಿಸುತ್ತಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಬಾಂಗ್ಲಾದೇಶದ ಹಿರಿಯ ರಾಜಕಾರಣಿ ಮೌಲಾನಾ ಬಷಾನಿಯವರ ಭಾರತ ಕುರಿತ ವಿರೋಧ ಹಳೆಯದು. ಬಾಂಗ್ಲಾ ಸ್ವತಂತ್ರಗೊಂಡು ಮುಜಿಬುರ್ ರಹಮಾನ್ ಅವರು ಅಧಿಕಾರ ಸೂತ್ರ ವಹಿಸಿಕೊಂಡ ಮೇಲೂ ಬಷಾನಿಯವರು ಬಾಂಗ್ಲಾದೇಶದ ಜನರ ಮನಸ್ಸಿನಲ್ಲಿ ಭಾರತದ ವಿರುದ್ಧ ಭಾವನೆ ಉಂಟು ಮಾಡಲು ಅಪಪ್ರಚಾರದಲ್ಲಿ ತೊಡಗಿದ್ದರೆಂಬುದು ಎಲ್ಲರಿಗೂ ತಿಳಿದ ವಿಷಯ. ತಮ್ಮ ದೇಶದಲ್ಲಿ ಯಾವ ಪ್ರಭುತ್ವವಿದ್ದರೂ ಬಷಾನಿಯವರಿಗೆ ಭಾರತದ ಬಗ್ಗೆ ವಿರೋಧ ಏಕನಾದ.

ಫರಕ್ಕಾ ಅಣೆಕಟ್ಟಿನ ಸಮಸ್ಯೆಯನ್ನು ಉಪಯೋಗಿಸಿಕೊಂಡು ಈಗ ಮತ್ತೊಂದು ಚಳವಳಿ ಕೈಗೊಂಡಿದ್ದಾರೆ. ನೆರೆ ರಾಷ್ಟ್ರದ ಗಡಿಯನ್ನು ಉಲ್ಲಂಘಿಸುವಂಥ ಗುರುತರ ಅಕ್ರಮಕ್ಕೆ ಹೊರಟಿರುವ ಬೇಜವಾಬ್ದಾರಿಯುತ ಕ್ರಮ ರಾಜಕೀಯ ಚಟುವಟಿಕೆ ಪ್ರತಿ ಬಂಧಿಸಲ್ಪಟ್ಟಿರುವ ಬಾಂಗ್ಲಾದೇಶದಲ್ಲಿ ಹೇಗೆ ಸಾಧ್ಯವಾಗುತ್ತಿದೆಯೆಂಬುದು ಆಶ್ಚರ್ಯಕರ. ಅದರಲ್ಲಿಯೂ ಫರಕ್ಕಾ ಫೀಡರ್ ನಾಲೆಗೆ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡುವಂಥ ರಿಯಾಯಿತಿಯನ್ನು ಭಾರತ ಸ್ವಯಂಪ್ರೇರಣೆಯಿಂದ ತೋರಿದ ಮೇಲೆ, ಎರಡೂ ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಚರ್ಚಿಸಲು ಉನ್ನತ ಮಟ್ಟದ ನಿಯೋಗ ಕಳುಹಿಸಲು ಭಾರತ ಆಲೋಚಿಸಿದ ಮೇಲೆ ಬಷಾನಿಯವರು ಫರಕ್ಕಾ ಅಣೆಯತ್ತ ನುಗ್ಗಲು ಪ್ರಯತ್ನಿಸುತ್ತಿರುವುದು ದುರುದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಅಂತರರಾಷ್ಟ್ರೀಯ ಶಾಂತಿ ಬಯಸುವವರೆಲ್ಲಾ ಖಂಡಿಸಬೇಕಾದ ಪ್ರವೃತ್ತಿ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.