ಹೆಚ್ಚಿದ ಪಾತಕ

ಕೇಂದ್ರ ಸರಕಾರದ ಗೃಹ ಸಚಿವ ಶಾಖೆಯ ಪೊಲೀಸ್ ತನಿಖಾ ವಿಭಾಗ 1973ನೆ ವರ್ಷದ ಪಾತಕಗಳಿಗೆ ಸಂಬಂಧಿಸಿದಂತೆ ವರ ದಿಯೊಂದನ್ನು ಇದೀಗ ಪ್ರಕಟಿಸಿದೆ. ಎರಡು ವರ್ಷಗಳಷ್ಟು ತಡವಾಗಿ ಪ್ರಕಟವಾಗುವ ಇಂಥ ವರದಿಗಳಿಂದ ಸದ್ಯದ ಪರಿಸ್ಥಿತಿಯ ಚಿತ್ರ ವ್ಯಕ್ತಪಡದಿದ್ದರೂ ಸಾರ್ವತ್ರಿಕವಾಗಿ ಬೆಳೆಯುತ್ತಿರುವ ಪ್ರವೃತ್ತಿಯ ಪರಿಚಯ ಆಗುತ್ತದೆ. ಈ ದೃಷ್ಟಿಯಿಂದ ವರದಿಯ ಪುಟಗಳನ್ನು ತಿರುವಿ ಹಾಕಿದಾಗ ಉಂಟಾಗುವ ಸಮಾಧಾನಕ್ಕಿಂತ ಕಳವಳವೇ ಹೆಚ್ಚು.

1963–73ರ ದಶಕದಲ್ಲಿ ಭಾರತದಲ್ಲಿನ ಪಾತಕಗಳ ಪ್ರಮಾಣ ಶೇ 63.5ರಷ್ಟು ಹೆಚ್ಚಿದೆ ಎನ್ನು ವುದು ಕೇವಲ ಕಳ ವಳವಲ್ಲ ದಿಗ್ಧಮೆ ಮೂಡಿಸುವ ಅಂಶ. ಇದೇ ಅವಧಿಯಲ್ಲಿ ಶೇ. 26.1ರಷ್ಟು ಜನಸಂಖ್ಯೆ ಹೆಚ್ಚಿದೆ. 1972–73ರ ವರ್ಷ ಒಂದರಲ್ಲೇ ಜ್ಞೇಯ ಅಪರಾಧಗಳ ಸ೦ಖ್ಯೆ ಶೇ. 9.4ರಷ್ಟು ಹೆಚ್ಚಿದೆ. ಕಳೆದ ದಶಕದಲ್ಲಿ ಕೊಲೆ, ದರೋಡೆ, ದೊಂಬಿ ಮತ್ತು ಮೋಸ ಕೃತ್ಯಗಳು ಸರಾಸರಿಯಾಗಿ ಶೇ. 10 ಕ್ಕಿಂತ ಹೆಚ್ಚಾಗಿವೆ. ಖೋಟಾನೋಟು ತಯಾರಿಕೆ ಒಂದೇ ಸಾಕಷ್ಟು ಕಡಿಮೆ ಯಾಗಿರುವ ಪಾತಕ.

ಪೊಲೀಸ್ ವರದಿ ಮತ್ತು ಅಂಕಿ ಅಂಶಗಳು ಎಷ್ಟೇ ಕರಾರುವಾಕ್ಕಾಗಿರುತ್ತವೆ ಎಂದು ನಂಬಿದರೂ, ಇವು ತೋರಿಸುವುದಕ್ಕಿಂತ ಹೆಚ್ಚಿನ ಪಾತಕಗಳು ವಾಸ್ತವವಾಗಿ ಸಂಭವಿಸಿರುತ್ತವೆ. ಭಾರತದಂತಹ ವಿಶಾಲವಾದ, ಪೂಣ೯ ಸಂಪರ್ಕ ಸಾಧನಗಳಿಲ್ಲದ ರಾಷ್ಟ್ರದಲ್ಲಿ ಇದು ಸ್ವಾ ಭಾ ವಿ ಕ. ಪೊಲೀಸ್ ವರದಿಗಳ ಲೆಕ್ಕಕ್ಕೆ ಸಿಕ್ಕುವುದು ಅವರಿಗೆ ಬಂದ ದೂರುಗಳನ್ನು ಅವಲಂಬಿಸಿದ ಪಾತಕಗಳಷ್ಟೆ. ಅವರ ಗಮನಕ್ಕೆ ಬರದ ಇನ್ನೆಷ್ಟೋ ಪಾತಕ ಗಳು ನಡೆದಿರುತ್ತವೆ. ವಾಸ್ತವವಾಗಿ ಅವರ ಗಮನಕ್ಕೆ ಬಂದೂ ಲೆಕ್ಕಕ್ಕೆ ಸೇರದಂಥ ದುಷ್ಕೃತ್ಯಗಳೂ ಇರುತ್ತವೆ. ಇವರಿಂದಾಗಿ ಈ ವರದಿಯಲ್ಲಿ ಸೂಚಿಸ ಲಾಗಿರುವ ಹಲವು ಬಗೆಯ ದುಷ್ಕೃತ್ಯ ಗಳ ನಿವಾರಣೆಯ ಬಗೆಗೆ ಸಾಕಷ್ಟು ಪ್ರಯತ್ನ, ಶ್ರದ್ಧೆ ಕಾಣಬರುತ್ತಿಲ್ಲವೇನೋ ಎಂಬ ಸಂದೇಹ ಮೂಡುತ್ತಿದೆ. ಇಂಥವುಗಳಲ್ಲಿ ಬಾಲ ಹಾಗೂ ಕಿಶೋರ ವಯಸ್ಸಿನ ಪಾತಕಗಳು ಗಮನಾರ್ಹ. 1963–73ರ ದಶಕದಲ್ಲಿ ಒಟ್ಟು ಅಪರಾಧಿಗಳ ಪ್ರಮಾಣ ಶೇ. 63 ರಿಂದ 18.7ಕ್ಕೆ ಇಳಿದಿದೆ ಎನ್ನುವುದು ಸಮಾಧಾನದ అంಶವಾದರೂ 1921ರಿಂದ ಈ ಶೇಕಡ ಪ್ರಮಾಣದ ಸಂಖ್ಯೆ ಕ್ರಮವಾಗಿ ಹೆಚ್ಚುತ್ತಿದೆ.

1972ರಲ್ಲಿ 16 ರಿಂದ 18 ವಯೋಮಾನದ ಬಾಲಾಪರಾಧಿಗಳ ಸಂಖ್ಯೆ ಶೇ. 24.9ಷ್ಟು ಹೆಚ್ಚಿದೆ. ವಿವಿಧ ದುಷ್ಕೃತ್ಯಗಳ ಪ್ರಮಾಣವನ್ನು ಪರಿಶೀಲಿಸಿದಾಗ 1973ನೇ ವರ್ಷದಲ್ಲಿ 2004 ಕೊಲೆ ಗಳನ್ನು, 26,854 ಕಳವುಗಳನ್ನು, 508 ಅತ್ಯಾಚರಗಳನ್ನು ಬಾಲಕರು ಎಸಗಿದ್ದಾರೆ ಎಂದು ಹೇಳಲಾಗಿದೆ.

ದೇಶದ ಆರ್ಥಿಕ ಸ್ಥಿತಿ, ನಿರುದ್ಯೋಗ, ಬಡತನ ಮತ್ತು ಶ್ರೀಮಂತಿಕೆಗಳ ನಡುವಣ ಅಂತರ ಇತ್ಯಾದಿ ಅಂಶಗಳು ದೇಶದಲ್ಲಿ ನಡೆಯುವ ದುಷ್ಕೃತ್ಯ ಗಳ ಏರಿಳಿತ ಎಷ್ಟರಮಟ್ಟಿಗೆ ಕಾರಣ ಎನ್ನುವುದು ಕುತೂಹಲಕಾರಿ ಅಂಶ. ಅಮೆರಿಕದಂಥ ಶ್ರೀಮಂತ ರಾಷ್ಟ್ರ ದೊಂದಿಗೆ ಹೋಲಿಸಿದಾಗ ಭಾರತದಲ್ಲಿನ ಪಾತಕ ಪ್ರಮಾಣ ಕಡಿಮೆಯಾಗಿ ಕಾಣುತ್ತದೆ. ಅದೇ ರೀತಿ ಭಾರತಕ್ಕಿಂತ ಆರ್ಥಿಕವಾಗಿ ಹಿಂದುಳಿದಿರುವ ರಾಷ್ಟ್ರ ಗಳಲ್ಲೂ ಸಹ ಭಾರತಕ್ಕಿಂತ ಹೆಚ್ಚಿನ ಪಾತಕ ಪ್ರಮಾಣ ಕಂಡು ಬರುತ್ತದೆ. ಅಂದರೆ ದುಷ್ಕೃತ್ಯಗಳಿಗೂ ಆರ್ಥಿಕ ಪ್ರಗತಿಗೂ ಸಂಬಂಧವಿಲ್ಲ ಎಂದು ಭಾವಿಸಲಾಗದು.

ತೀವ್ರ ಬಡತನದಂತೆಯೆ ತೀವ್ರವಾದ ಶ್ರೀವ೦ತರ ಅನುಕರಣಾಭಿಲಾಷೆ ಪಾತಕಗಳಿಗೆ ಕಾರಣವಾಗಬಹುದು. ಅಪರಾಧ ಮಾಡಿಯಾದ ಮೇಲೆ ಅಂಥವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸುವುದರಿಂದ ದುಷ್ಕೃ ತೃಗಳ ಸಂಖ್ಯೆ ಕಡಿಮೆ ಆಗುವುದಂತೂ ಕಡಿಮೆಯೆ. ದುಷ್ಕೃತ್ಯಗಳು ನಡೆಯದಂತೆ ಮುಂಜಾಗ್ರತೆ ಕ್ರಮಗಳಿಗೆ ಆದ್ಯತೆ ದೊರೆತಾಗ ಪಾತಕಗಳ ಪ್ರಮಾಣ ಕಡಿಮೆ ಆದೀತು.

ಜನಜೀವನ ಆರ್ಥಿಕವಾಗಿ ಸುಧಾರಿಸಿದಂತೆ, ನಿರುದ್ಯೋಗ ನಿವಾರಣೆ ಆದಂತೆ. ಗೃಹಜೀವನ ಹೆಚ್ಚು ಸಹ್ಯವೂ ಆಪ್ಯಾಯವೂ ಆದಂತೆ, ಮಕ್ಕಳ ಲಾಲನೆ, ಪಾಲನೆಗಳಲ್ಲಿ ತಾಯಿ ತಂದೆಯರು ಜಾಗೃತಿ ವಹಿಸಿದಂತೆ, ಸಕಾಲದಲ್ಲಿ ಯೋಗ್ಯ ನೈತಿಕ ಶಿಕ್ಷಣ ಹೆಚ್ಚಿದಂತೆ ಪಾತಕಗಳ ಪ್ರಮಾಣ ಕಡಿಮೆ ಆದೀತೋ ಏನೋ ಆದರೆ, ಇಂಥ ಒಂದು ಪ್ರಯೋಗ ಜಗತ್ತಿನ ಯಾವುದಾದರೂ ನಾಡಿನಲ್ಲಿ ನಡೆದಿದೆಯೆ ಎಂಬುದು ಕುತೂಹಲದ ಅಂಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.