ಕಡ್ಡಾಯ ಎಲ್ಲೂ ಅಸೂಕ್ತ

ಪರಸ್ಪರ ಅರ್ಥಮಾಡಿಕೊಳ್ಳುವುದಕ್ಕೆ ಭಾಷೆ ಒಂದು ವಾಹಕ, ಆದರೆ ದುರದೃಷ್ಟವಶಾತ್ ಈ ಭಾಷಾ ಪ್ರಶ್ನೆಯೇ ಅಪಾರ್ಥ, ಅನೈಕ್ಯಕ್ಕೂ ಅನೇಕ ಸಂದರ್ಭಗಳಲ್ಲಿ ಕಾರಣವಾಗಿದೆ. ಭಾಷಾ ಪ್ರಶ್ನೆ ಸೂಕ್ಷ್ಮವಾದ್ದರಿಂದ, ಸುಲಭವಾಗಿ ಕೆರಳಿಸುವಂಥದಾದುದರಿಂದ ಕೆಲವರು ವೈಯಕ್ತಿಕ ಸ್ವಾರ್ಥಕ್ಕೋ, ರಾಜಕಾರಣಕ್ಕೋ, ಅಂಧಾಭಿಮಾನಕ್ಕಾಗಿಯೋ ಉಪಯೋಗಿಸಿಕೊಂಡು ಜನರನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ. ಭಾಷಾ ಪ್ರಶ್ನೆಯ ಈ ರೀತಿಯ ದುರುಪಯೋಗದಿಂದಾಗಿ ನಾಡಿನ ಕೆಲವು ರಾಜ್ಯಗಳಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸಾಕಷ್ಟು, ಬೆಲೆ ತೆರಲಾಗಿದೆ. ಆದುದರಿಂದಲೇ ಇಂಥವರು ಉಂಟುಮಾಡಿದ ಸಂಶಯಗಳನ್ನು ನಿವಾರಿಸುವಲ್ಲಿ ನಾನಾ ನಾಯಕರು ಈಚೆಗೆ ನೀಡಿದ ಭರವಸೆ ಸ್ವಾಗತಾರ್ಹವಾದುದು.

‘ಹಿಂದಿಯನ್ನು ಕ್ರಮೇಣ ಜಾರಿಗೆ ತರಬೇಕೇ ಹೊರತು ತಮ್ಮ ಮೇಲೆ ಹೇರಲಾಗುತ್ತಿದೆಯೆಂಬ ಭಾವನೆ ಜನರಲ್ಲಿ ಉಂಟಾಗುವಂತಾಗಬಾರದು’ ಎಂದು ರಾಜ್ಯಪಾಲ ಉಮಾಶಂಕರ್ ದೀಕ್ಷಿತ್ ರವರು ಬುಧವಾರ ಬೆಂಗಳೂರಿನಲ್ಲಿ ನೀಡಿದ ಸಲಹೆ ಜನರಲ್ಲಿ ಸಂಶಯ ನಿವಾರಿಸುವತ್ತ ಮತ್ತೊಂದು ಹೆಜ್ಜೆ. ಉತ್ತರ ಭಾರತದ ವಿಶ್ವವಿದ್ಯಾಲಯಗಳಲ್ಲಿ ದಕ್ಷಿಣದ ಯಾವುದಾದರೂ ಒಂದು ಭಾಷೆಯನ್ನು ಕಲಿಸಬೇಕೆಂಬ ದೀಕ್ಷಿತರ ಸಲಹೆ ಒಂದು ಮಿತಿಯಲ್ಲಿ ಅದು ಕಾರ್ಯಗತವಾಗಿದೆ. ದೀಕ್ಷಿತರು ಹೇಳುವಂತೆ ಕಡ್ಡಾಯ ಮಾಡುವುದು ಅಗತ್ಯವೆ? ಎಂಬುದನ್ನು ಕೂಲಂಕಷ ವಾಗಿ ಪರಿಶೀಲಿಸಬೇಕು. ಕಡ್ಡಾಯ ಯಾವ ಪ್ರದೇಶದಲ್ಲಾದರೂ ಅಹಿತಕರ ಪರಿಣಾಮವನ್ನುಂಟುಮಾಡಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.