ಕಾರ್ಮಿಕರ ಕಲ್ಯಾಣ

ಸ್ವಾತಂತ್ರ್ಯನಂತರ ಭಾರತದಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಬೇಕಾದಷ್ಟು ಶಾಸನಗಳಿವೆ. ಅವುಗಳೆಲ್ಲವನ್ನೂ ಕಾರ್ಯಗತ ಮಾಡುವುದರಲ್ಲಿ ಅಲ್ಲೊಂದು, ಇಲ್ಲೊಂದು ಲೋಪವಾಗಿರಬಹುದಾದರೂ ಒಟ್ಟಿನಲ್ಲಿ ಈ ಕಾನೂನುಗಳು ಕಾರ್ಮಿಕನಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸಿವೆ. ಆದರೂ ಕಾರ್ಮಿಕ ಇನ್ನೂ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆಂಬುದು ನಿರ್ವಿವಾದ. ಅದರಲ್ಲಿಯೂ ವಸತಿ ಮತ್ತು ಮಕ್ಕಳ ವಿದ್ಯಾಭ್ಯಾಸದಂತಹ ಸಮಸ್ಯೆಗಳು ಕಾರ್ಮಿಕನನ್ನು ಸಾಕಷ್ಟು ಮಟ್ಟಿಗೆ ಕಾಡುತ್ತಿವೆ. ಈ ಹಿನ್ನಲೆಯಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಕಷ್ಟು ಹಣ ಒದಗಿಸುವುದಕ್ಕೆ ಶಾಸನಗಳನ್ನು ಮಾರ್ಪಾಟು ಮಾಡಲು ರಾಜ್ಯ ಸರಕಾರ ಆಲೋಚಿ ಸುತ್ತಿದೆಯೆಂಬ ಕಾರ್ಮಿಕ ಸಚಿವ ಎಸ್. ಎಂ. ಯಾಹ್ಯಾರವರ ಹೇಳಿಕೆ ತುಂಬ ಗಮ ನಾರ್ಹವಾದುದು.

ತಿದ್ದುಪಡಿಯಂತೆ ಕಾರ್ಮಿಕರ ಕಲ್ಯಾಣ ನಿಧಿಗಾಗಿ ಕಾರ್ಮಿಕರು ಮತ್ತು ಮಾಲೀಕರಿಂದ ಕಾಣಿಕೆ ಪಡೆಯುವುದರ ಜೊತೆಗೆ ಸರಕಾರವೂ ಒಂದು ಭಾಗ ನೀಡುವುದು. ಮೂವರ ಹೊಣೆಯ ಸೇರುವುದರಿಂದ ಕಾರ್ಮಿಕರ ಕಲ್ಯಾಣದ ಬಗ್ಗೆ ಸಂಬ೦ಧಪಟ್ಟವರೆಲ್ಲರೂ ತಾದಾತ್ಮ್ಯ, ಹೊಂದಿದಂತಾಗುತ್ತದೆ. ಈ ನಿಧಿಯಿಂದ ಕಾರ್ಮಿಕರ ಕೆಲ ಮೂಲಭೂತವಾದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದರ ಜೊತೆಗೆ ಪರಸ್ಪರ ಅರಿವಿನಿಂದ ಕೈಗಾರಿಕಾ ಶಾಂತಿ ಕಾಪಾಡುವುದಕ್ಕೂ ಸಹಾಯಕವಾಗಬಲ್ಲದೆಂದು ನಿರೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.