ತೆರಿಗೆಯನ್ನು ಉತ್ಸಾಹದಿಂದ ಕೊಡುವ ಸಂದರ್ಭಗಳು ಅಪರೂಪ. ಅದು ಮಾನವ ಸ್ವಭಾವ, ತೆರಿಗೆಯ ವಿಷಯದಲ್ಲಿ ಪರಂಪರಾನುಗತ ಕಲ್ಪನೆಯು ಇದಕ್ಕೆ ಕಾರಣ. ಆದರೆ ಈಚಿನ ದಶಕಗಳಲ್ಲಿ ತೆರಿಗೆಯ ಉದ್ದೇಶವೇ ಸಂಪುರ್ಣ ಬದಲಾಗಿದೆ. ಜನತೆಗಾಗಿಯೇ ಕೈಗೊಳ್ಳುವ ನಾನಾ ಯೋಜನೆಗಳಿಗೆ ಪ್ರಭುತ್ವ ಮಾಡುವ ವೆಚ್ಚಕ್ಕಾಗಿ ತೆರಿಗೆಯ ಅಗತ್ಯವಿದೆಯೆಂಬುದನ್ನು ಮನವರಿಕೆ ಮಾಡಿಕೊಡಲು ಇಂದು ವಿಶೇಷ ಶ್ರಮದ ಅಗತ್ಯವಿಲ್ಲ. ಕೆಲವು ನಿರ್ದಿಷ್ಟ ತರಿಗೆಗಳು ಮತ್ತು ತೆರಿಗೆಯ ಪ್ರಮಾಣದ ಬಗ್ಗೆ ಆತೃಪ್ತಿ ವ್ಯಕ್ತವಾಗಬಹುದಾದರೂ ತೆರಿಗೆಯ ಮೂಲೋದ್ದೇಶವನ್ನು ಪ್ರಶ್ನಿಸುವ ಕಾಲ ಮುಗಿದಿದೆ.

ಜನ ತೆರಿಗೆಯ ಅನಿವಾರ್ಯವನ್ನು ಒಪ್ಪಿಕೊಂಡು ತೆರಿಗೆ ಕೊಡಲು ಸಿದ್ದವಿದ್ದರೂ ತೆರಿಗೆಯ ಪಾವತಿಯೇ ಒಂದು ಸಮಸ್ಯೆಯಾದರೆ ತೆರಿಗೆದಾರ ಹತಾಶಗೊಳ್ಳುತ್ತಾನೆ. ಸರ್ಕಾರ ಕೂಡ ಈ ಅಂಶವನ್ನು ಮನಗಂಡು ತೆರಿಗೆ ಪಾವತಿ ಮತ್ತು ಆ ಸಂಬಂಧದ ದಾಖಲೆಗಳನ್ನು ಸಲ್ಲಿಸುವುದನ್ನು ಸರಳಗೊಳಿಸಲು ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ ಕ್ರಮ.

ತೆರಿಗೆ ಪಾವತಿಯೇ ಕ್ಲಿಷ್ಟವಾದರೆ ಸಾಮಾನ್ಯ ತೆರಿಗೆದಾರರೆಲ್ಲಾ ವಕೀಲರನ್ನು ಅವಲಂಬಿಸಬೇಕಾಗುತ್ತೆ. ಅದು ಭಾರಕ್ಕೆ ಭಾರ. ಈಗ ವರಮಾನ ತೆರಿಗೆ ಅದರಲ್ಲಿಯೂ ವೇತನ ಪಡೆಯುವವರು ಸಲ್ಲಿಸಬೇಕಾದ ಆದಾಯ ತೆರಿಗೆ ದಾಖಲೆಗಳನ್ನು ಸರಳಗೊಳಿಸಲಾಗಿದೆ. ಈ ಕ್ರಮ ತೆರಿಗೆ ಹೊರಯನ್ನೇ ಕೆಲ ಮಟ್ಟಿಗೆ ಹಗುರಗೊಳಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.