ಶಿಶು ಕಲ್ಯಾಣ

ಮಕ್ಕಳು ಮನೆಯ ಭಾಗ್ಯವಷ್ಟೆ ಅಲ್ಲ. ರಾಷ್ಟ್ರದ ಭಾಗ್ಯವೂ ಹೌದು. ಅವರನ್ನು ಮುದ್ದು ಮೊದ್ದಾಗಿ ಬೆಳೆಸುವುದಷ್ಟೆ ಅಲ್ಲ; ಅವರ ಆರೋಗ್ಯ, ಬೆಳವಣಿಗೆ, ಶಿಕ್ಷಣ ಮೊದಲಾದ ಅಂಶಗಳತ್ತ ಸಹ ವಿಶೇಷ ಗಮನ ನೀಡಬೇಕಾದ್ದು ಅಗತ್ಯ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೇ ಲಕ್ಷಲಕ್ಷ ಮಕ್ಕಳು ಹೊಟ್ಟೆಗಿಲ್ಲದೆ, ರೋಗ–ರುಜಿಗಳಿಂದ ಕೂಡಿ, ಸಾವು-ಬದುಕಿನ ಸುಳಿಯಲ್ಲಿ ನರಳುತ್ತಿರುವಾಗ ಇನ್ನೂ ಹಿಂದುಳಿದ ರಾಷ್ಟ್ರಗಳ ಬವಣೆ ವರ್ಣನಾತೀತ. ರಾಷ್ಟ್ರಗಳ ಆದಾಯ-ವೆಚ್ಚದ ಹೊಂದಾಣಿಕೆಯಲ್ಲಿ ಶಿಶು ಕಲ್ಯಾಣಕ್ಕೆ ದೊರಕುವ ಸ್ಥಾನ ಅತ್ಯಲ್ಪ. ಜಿನೀವಾದಲ್ಲಿ ಇದೀಗ ಸಮಾವೇಶವಾಗಿರುವ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ಭಾರತ ನಿಯೋಗದ ನಾಯಕ ಡಾ. ಕರಣಸಿಂಗ್ ಅವರು ಶಿಶು ಕಲ್ಯಾಣವನ್ನು, ಆಯಾ ರಾಷ್ಟ್ರದ ಆರ್ಥಿಕ, ಆರೋಗ್ಯ, ಆಹಾರ ಮೊದಲಾದ ಸಮಸ್ಯೆಗಳಿಂದ ಪ್ರತ್ಯೇಕಿಸದೆ ಸಮಗ್ರವಾಗಿ ಪರಿಶೀಲಿಸಬೇಕು ಎಂದಿದ್ದಾರೆ. ಉಳ್ಳವರ ಆದಾಯ ಅಜೀರ್ಣವಾಗುವಷ್ಟು ತಿನ್ನುವುದಕ್ಕೆ, ಕಾಲು ಕೆರೆದು ಜಗಳ ಎಬ್ಬಿಸಿ ಯುದ್ಧಗಳನ್ನು ಮಾಡಿ, ಜನಸಮುದಾಯಗಳನ್ನೇ ಕೆರೆದು ಮುಗಿಸಲಿಕ್ಕೆ ವಿನಿಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಕೋಟಿ ಕೋಟಿ ಜನ ಉಗ್ರವಾದ ಬಡತನ, ಉಪವಾಸದ ರೋಗಗಳಿಂದ ನರಳುವುದನ್ನು ‘ಭವಿಷ್ಯದ ಮಾನವ ಸಂತಾನ’ ಎಂದು ಪರಿಗಣಿಸುವುದು ಎಂದಿದ್ದಾರೆ ಕರಣ್ ಸಿಂಗ್. ಈ ಮಾತಿನ ಅರ್ಥ ಈಗಲೇ ಉಳ್ಳವರು ಇಲ್ಲದವರ ನೆರವಿಗೆ ಧಾವಿಸಬೇಕು ಎಂಬುದು. ಅಲ್ಪವಯಿಗಳು ಅಕಾಲ ಮರಣಕ್ಕೆ ತುತ್ತಾಗದಂತೆ ಮತ್ತು ಅಂಗವಿಕಲರೂ, ಗುಣಪಡಿಸಲಾಗದ ರೋಗರುಜಿನಗಳಿಂದ ನರಳದ೦ತೆಯೂ ಸರ್ಕಾರಗಳು, ಜನತೆ ಎಚ್ಚರ ವಹಿಸಬೇಕು, ಕಾರ್ಯನಿರತವಾಗಬೇಕು. ‘ಈ ಶತಮಾನದ ಅಂತ್ಯದೊಳಗೆ ಸಾರ್ವಜನಿಕ ಆರೋಗ್ಯಕ್ಕೆ, ಮುಖ್ಯವಾಗಿ ಮಕ್ಕಳ ಆರೋಗ್ಯಕ್ಕೆ ಘಾತವಾಗಿರುವ ಪರಿಸ್ಥಿತಿಗಳನ್ನು ನಿವಾರಿಸದಿದ್ದರೆ ಜಗತ್ತಿನ ಶಾಂತಿ ವ್ಯವಸ್ಥೆಯೇ ಅಲ್ಲಕಲ್ಲೋಲವಾದೀತು’ ಎಂಬ ಎಚ್ಚರಿಕೆ ಕೇವಲ ಭೀತಿ ಪ್ರಚೋದಕ ವಲ್ಲ, ವಸ್ತುಸ್ಥಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.