ಪಂಚಾಯತಿಗಳು

ಸರ್ಕಾರಿ ನೌಕರರ ಸೇವಾ ವ್ಯವಸ್ಥೆಯಲ್ಲಿ ಉದ್ಭವಿಸುವ ತಕರಾರುಗಳನ್ನು ನೌಕರರು ನ್ಯಾಯಾಲಯಗಳಿಗೆ ಒಯ್ಯುವ ಅವಕಾಶದಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸುತ್ತಲಿವೆ. ಆಡಳಿತದಲ್ಲಿ ಶಿಸ್ತು, ದಕ್ಷತೆ ಮತ್ತು ಪ್ರಾಮಾಣಿಕತೆ ಮೂಡಿಸಲು ಸರಕಾರ ಅನೇಕ ಸಂದರ್ಭಗಳಲ್ಲಿ ಅಧಿಕಾರಿ ಹಾಗೂ ನೌಕರರನ್ನು ಸ್ಥಗಿತಗೊಳಿಸುತ್ತದೆ. ವಜಾ ಮಾಡುತ್ತದೆ. ಬಡ್ತಿ ನಿಲ್ಲಿಸುತ್ತದೆ. ಕೆಳವರ್ಗಕ್ಕೆ ಇಳಿಸುತ್ತದೆ. ಇಂಥ ಕ್ರಮಗಳಿಂದ ತೊಂದರೆಗೊಳಗಾದ ನೌಕರರು ನ್ಯಾಯಾಲಯಗಳಲ್ಲಿ ರಿಟ್ ಅರ್ಜಿಗಳನ್ನು ಹಾಕಿ ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಾರೆ. ಇಂಥ ಒಂದು ಸೌಲಭ್ಯ ಅನೇಕ ವೇಳೆ ದುರುಪಯೋಗವಾಗಿ ಸೇವಾ ವ್ಯವಸ್ಥೆಯಲ್ಲಿ ಅಶಿಸ್ತು, ಅವಿಧೇಯತೆಗಳು ಬೆಳೆಯಲು ಕಾರಣವಾಗಿದೆ.

ಈ ಪರಿಸ್ಥಿತಿ ತಪ್ಪಿಸುವುದು ಎಂತು ಎಂಬ ಪ್ರಶ್ನೆ ಕೆಲಕಾಲದಿಂದ ಸರ್ಕಾರದ ಮುಂದಿದ್ದು, ಆಡಳಿತ ಸುಧಾರಣಾ ಸಮಿತಿ ಸರಕಾರಿ ಸೇವಾ ಸಂಬಂಧವಾದ ವಿವಾದಗಳ ಇತ್ಯರ್ಥವನ್ನು ಶ್ರೇಷ್ಠ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರತು ಪಡಿಸಿ ಸೇವಾ ಪಂಚಾಯತಿಗಳನ್ನು ನೇಮಿಸಿ ಅವುಗಳ ವ್ಯಾಪ್ತಿಗೆ ಒಳಪಡಿಸಬೇಕೆಂದು ಸಲಹೆ ಮಾಡಿತ್ತು. ಈ ಸಲಹೆಯನ್ನು ಸ್ವರ್ಣ ಸಿಂಗ್ ಸಂವಿಧಾನ ಸುಧಾರಣಾ ಸಮಿತಿ ಎತ್ತಿ ಹಿಡಿದು, ನೌಕರರ ವಿವಾದಗಳನ್ನು ಹೈಕೋರ್ಟುಗಳ ವ್ಯಾಪಿಯಿಂದ ಹೊರತುಪಡಿಸಬೇಕು ಎಂದಿದೆ. ಕೇಂದ್ರ ಹಾಗೂ ರಾಜ್ಯಮಟ್ಟದ ಟ್ರಿಬ್ಯೂನಲ್ಗಳ ರಚನೆ, ಕಾರ್ಯವ್ಯಾಪ್ತಿ ರೂಪಿಸುತ್ತಿರುವ ಸಮಿತಿಯೊಂದು ಆಂಧ್ರದಲ್ಲಿ ರಚಿತವಾಗಿರುವ ಇಂಥ ಟ್ರಿಬ್ಯೂನಲ್ನ ಕಾರ್ಯವನ್ನು ಸಮಗ್ರವಾಗಿ ಅಭ್ಯಸಿಸುತ್ತಿದೆ. ಟ್ರಿಬ್ಯೂನಲ್ಗಳ ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟಿಗೆ ಅಪೀಲು ಹೋಗುವ ಅವಕಾಶವಿರುತ್ತದೆಯಾಗಿ ನೌಕರರ ಹಕ್ಕಿಗೆ ಚ್ಯುತಿ ಬಂದೀತೆಂಬ ಭೀತಿಗೆ ಕಾರಣ ಇರಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.