ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ 04–03–1997

Last Updated 3 ಮಾರ್ಚ್ 2022, 23:15 IST
ಅಕ್ಷರ ಗಾತ್ರ

ಸಂಸತ್ತಿನಲ್ಲಿ ಮಹಿಳೆಯರಿಗೆ ಸ್ಥಾನ ಮೀಸಲಿಗೆ ವಿರೋಧ: ಗುಜ್ರಾಲ್‌

ನವದೆಹಲಿ, ಮಾ. 3 (ಪಿಟಿಐ)– ಸಂಸತ್ತು ಮತ್ತು ವಿಧಾನ ಮಂಡಲಗಳಲ್ಲಿ ಮಹಿಳೆಯರಿಗಾಗಿ ಶೇಕಡ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡ ಬಯಸುವ ಮಸೂದೆಗೆ ಬಲವಾದ ವಿರೋಧವಿದೆ ಎಂಬ ಅಂಶವನ್ನು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಐ.ಕೆ.ಗುಜ್ರಾಲ್‌ ಇಂದು ಒಪ್ಪಿಕೊಂಡಿದ್ದಾರೆ.

‘ಸಂಸತ್ತಿನ ಕೆಲವು ಅತ್ಯಂತ ಸುಶಿಕ್ಷಿತ ಪುರುಷ ಸದಸ್ಯರೂ ಈ ಮಸೂದೆಯನ್ನು ಹಾನಿಕಾರಕ ಎಂದು ಕರೆದಿದ್ದಾರೆ’ ಎಂದು ತಿಳಿಸಿದ ಅವರು, ‘ಕಾನೂನುಗಳನ್ನು ಬದಲಾಯಿಸುವುದು ಸುಲಭ; ಆದರೆ ಮನೋಭಾವಗಳನ್ನು ಅಷ್ಟು ಸುಲಭವಾಗಿ ಬದಲಿಸಲಾಗುವುದಿಲ್ಲ’ ಎಂದರು.

‘ಮಹಿಳೆಯರ ಉದ್ಯೋಗ, ವಿವಾಹ ವಯಸ್ಸು ಹಾಗೂ ಜನಸಂಖ್ಯೆ’ ಕುರಿತಂತೆ ಐತಿಹಾಸಿಕ ಜನಸಂಖ್ಯಾ ಅಂತರ
ರಾಷ್ಟ್ರೀಯ ಆಯೋಗದ (ಸಿಐಡಿಎಚ್‌)ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಎಕ್ಸ್‌ಪ್ರೆಸ್‌ ಹಳಿ ತಪ್ಪಿ 100 ಮಂದಿಗೆ ಗಾಯ

ಭೋಪಾಲ್‌, ಮಾ. 3 (ಪಿಟಿಐ)– ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ‘ಕರ್ನಾಟಕ ಎಕ್ಸ್‌ಪ್ರೆಸ್‌’ ರೈಲಿನ 16 ಬೋಗಿಗಳು ಇಂದು ಮುಂಜಾನೆ ಇಲ್ಲಿಗೆ ಸುಮಾರು 150 ಕಿ.ಮೀ. ದೂರದ ಬೀನಾ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದ್ದರಿಂದ 100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT