ಚುನಾವಣಾ ಆಯುಕ್ತರ ಆಯ್ಕೆ ಪ್ರಧಾನಿ ಮರ್ಜಿಗೆ ಬೇಡ: ಶೇಷನ್
ನವದೆಹಲಿ, ಜುಲೈ 13 (ಯುಎನ್‌ಐ)– ‘ಚುನಾವಣಾ ಆಯೋಗದ ಆಯುಕ್ತರನ್ನು ನೇಮಿಸುವಾಗ ಅದನ್ನು ಒಬ್ಬ ವ್ಯಕ್ತಿಯ, ಅಂದರೆ ಪ್ರಧಾನ ಮಂತ್ರಿಯ ಇಚ್ಛೆಗೆ ಬಿಟ್ಟುಬಿಡುವುದು ಸರಿಯಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಈ ನಾಡು ಟಿವಿ’ಗೆ ನೀಡಿದ ಸಂದರ್ಶನ ದಲ್ಲಿ ಶೇಷನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘ನನ್ನನ್ನು ಕೂಡಾ
ಪ್ರಧಾನ ಮಂತ್ರಿಯೇ ನೇಮಿಸಿದ್ದಾರೆ. ಆದರೆ ನನ್ನನ್ನು ಅವರು ಬಳಸಿಕೊಳ್ಳಲು ಅವಕಾಶ ನೀಡಿಲ್ಲ. ಒಟ್ಟಾರೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮುಖ್ಯವಾಗಿ ಜನರ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನೇಮಕ ಹಾಗೂ ಸ್ವರೂಪ ನಿರ್ಧಾರವಾಗಬೇಕು’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.