ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ, 17–7–1996

Last Updated 16 ಜುಲೈ 2021, 19:30 IST
ಅಕ್ಷರ ಗಾತ್ರ

ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯ

ನವದೆಹಲಿ, ಜುಲೈ 16– ಬೆಂಗಳೂರಿಗೆ ಹೊಸದಾಗಿ ಹೆಚ್ಚುವರಿ ರೈಲ್ವೆ ವಲಯ, ಕೊಂಕಣ ರೈಲ್ವೆ, ಅಕ್ಟೋಬರ್‌ನಿಂದ ಸರಕು ಸಾಗಣೆಗೆ ಮತ್ತು ಡಿಸೆಂಬರ್‌ನಿಂದ ಪ್ರಯಾಣಿಕರಿಗಾಗಿ ಸಂಚಾರ ಆರಂಭ. ಶತಾಬ್ದಿ ಎಕ್ಸ್‌ಪ್ರೆಸ್ ಬದಲು ಹುಬ್ಬಳ್ಳಿ–ಬೆಂಗಳೂರು ನಡುವೆ ಅಂತರ ನಗರ ಎಕ್ಸ್‌ಪ್ರೆಸ್ ರೈಲು, ಚಿಕ್ಕಮಗಳೂರು ಮಾರ್ಗವಾಗಿ ಕಡೂರಿನಿಂದ ಸಕಲೇಶಪುರದವರೆಗೆ ಹೊಸ ರೈಲುಮಾರ್ಗ ನಿರ್ಮಾಣ.

ರೈಲ್ವೆ ಸಚಿವ ರಾಂ ವಿಲಾಸ್ ಪಾಸ್ವಾನ್ ಇಂದು ಲೋಕಸಭೆಯಲ್ಲಿ ಮಂಡಿಸಿದ ಎಚ್‌.ಡಿ. ದೇವೇಗೌಡ ನೇತೃತ್ವದ ಸರ್ಕಾರದ ಚೊಚ್ಚಲ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೀಡಿರುವ ವಿಶೇಷ ಕೊಡುಗೆಗಳು ಇವು.

ಮಾನು, ಬಂದಗದ್ಡೆ ಅಪಘಾತದಲ್ಲಿ ಸಾವು

ಹಾಸನ, ಜುಲೈ 16– ಸಮಾಜವಾದಿ ಚಿಂತಕ ರಮೇಶ ಬಂದಗದ್ದೆ ಹಾಗೂ ಚಿತ್ರನಟ ಮಾನು ಅವರು ಇಂದು ಬೆಳಗಿನ ಜಾವ ಅರಸೀಕೆರೆ ಸಮೀಪ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT