ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ, 18–07–1997

Last Updated 17 ಜುಲೈ 2022, 14:59 IST
ಅಕ್ಷರ ಗಾತ್ರ

ನವದೆಹಲಿ, ಜುಲೈ 17 (ಪಿಟಿಐ)– ದೇಶದ ಹನ್ನೊಂದನೇರಾಷ್ಟ್ರಪತಿಯಾಗಿಕೊಚೆರಿಲ್‌ ರಾಮನ್‌ನಾರಾಯಣನ್ಅವರು ನಿರೀಕ್ಷೆಯಂತೆ ಇಂದು ಭಾರಿ ಬಹುಮತದಿಂದ ಆಯ್ಕೆಯಾದರು. ಇದರಿಂದ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ದಲಿತ ನಾಯಕರೊಬ್ಬರು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದಂತಾಗಿದೆ.

ದೇಶದ ಅತ್ಯುನ್ನತ ಹುದ್ದೆಗೆ ನೇರಸ್ಪ‌ರ್ಧೆ ಏರ್ಪಟ್ಟಿದ್ದ ಚುನಾವಣೆಯಲ್ಲಿ ಕೆ. ಆರ್‌.ನಾರಾಯಣನ್ಅವರು ಮಾಜಿ ಮುಖ್ಯ ಚುನಾವಣಾ ಕಮೀಷನರ್‌ ಟಿ.ಎನ್‌. ಶೇಷನ್ ಅವರ ವಿರುದ್ಧ 3,991 ಮತಗಳ ಭಾರಿ ಅಂತರದ ಜಯ ಸಾಧಿಸಿದರು.ನಾರಾಯಣನ್‌ ಅವರಿಗೆ 4,231 ಮತಗಳು ಬಂದವು. ಕೇವಲ 240 ಮತ ಗಳಿಸಿದ ಶೇಷನ್ ಠೇವಣಿ ಕಳೆದುಕೊಂಡರು.

ಪೂರ್ಣ ಕ್ಷಮಾದಾನಕ್ಕೆ ವೀರಪ್ಪ‍ನ್‌ ಬಿಗಿ ಪಟ್ಟು

ಚೆನ್ನೈ, ಜುಲೈ 17– ಅರಣ್ಯ ಇಲಾಖೆಯ 9 ಮಂದಿ ಸಿಬ್ಬಂದಿಯನ್ನು ವಶದಲ್ಲಿರಿಸಿಕೊಂಡ ವೀರ‍ಪ್ಪನ್‌, ತನಗೆ ಸರ್ಕಾರ ಕ್ಷಮಾದಾನ ನೀಡುವ ಹಾಗೂ ಮತ್ತಿತರ ಬೇಡಿಕೆಗಳ ಕುರಿತು ಯಾವುದೇ ರಾಜಿ ಬಯಸದೇ ತನ್ನ ನಿಲುವಿಗೇ ಅಂಟಿಕೊಂಡಿದ್ದಾನೆ.

‘ನಕ್ಕೀರನ್’ ತಮಿಳು ಪತ್ರಿಕೆಯ ಸಂಪಾದಕ ಆರ್‌. ಗೋಪಾಲ್‌ ಅವರ ಪ್ರಕಾರ, ವೀರಪ್ಪನ್‌ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಗೋಪಾಲ್‌ ಅವರ ಮೂಲ‌ಕ ತಮಿಳುನಾಡು ಸರ್ಕಾರ ವೀರಪ್ಪನ್‌ ಜತೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಕರ್ನಾಟಕ ಸರ್ಕಾರ ಕಳುಹಿಸಿದ ಕ್ಯಾಸೆಟ್‌ಗಳ ಧ್ವ‌ನಿ ಮುದ್ರಿತ ಸಂದೇಶವನ್ನು ತಮಿಳುನಾಡಿನ ಗೃಹಮಂತ್ರಿ ಆರ್‌. ಪೂರ್ಣಲಿಂಗಂ ಅವರು ಗೋಪಾಲ್‌ ಅವರಿಗೆ ಕೇಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT