ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ, 23–07–1997

Last Updated 22 ಜುಲೈ 2022, 15:02 IST
ಅಕ್ಷರ ಗಾತ್ರ

ಸಮುದ್ರಯಾನ: ದೇವಾಲಯದ ಪೂಜಾರಿ ಹೊರಕ್ಕೆ

ತಿರುವನಂತರಪುರ, ಜುಲೈ 22 (ಯುಎನ್‌ಐ)– ತಿರುವಳ್ಳದ ವಲ್ಲಭ ದೇವಾಲಯದ ಪೂಜಾರಿಗೆ ಸಮುದ್ರಯಾನ ನಿಷೇಧ. ಆದರೆ, ಅದರ ಪೂಜಾರಿ ಹಾಗೂ ಪ್ರಸಿದ್ಧ ಕವಿ ವಿಷ್ಣು ನಾರಾಯಣ ನಂಬೂದಿರಿ ಇತ್ತೀಚೆಗೆ ಇಂಗ್ಲೆಂಡಿಗೆ ಹೋಗಿ ಬಂದರು.

ಶುದ್ಧಿ ಕಾರ್ಯ ನಿಮಿತ್ತ 1008 ಸಲ ಗಾಯತ್ರಿ ಮಂತ್ರ ಹೇಳಲು ನಿರಾಕರಿಸಿದ ಅವರನ್ನು ದೇವಸ್ಥಾನದಿಂದ ಹೊರಹಾಕಿ ವಿವಾದ ಸೃಷ್ಟಿಯಾಗಿದೆ.

ಲಾಲೂ ಸರ್ಕಾರ ವಜಾಕ್ಕೆ ವಿರೋಧಿ ಆಗ್ರಹ ಸಂಭವ

ನವದೆಹಲಿ, ಜುಲೈ 22– ನಾಳೆಯಿಂದ ಮೂರು ವಾರ ನಡೆಯಲಿರುವ ಸಂಸತ್‌ನ ಮುಂಗಾರು ಅಧಿವೇಶನವು ತೀವ್ರ ಗದ್ದಲ ಮತ್ತು ಕೋಲಾಹಲ ಎಬ್ಬಿಸುವ ಸಾಧ್ಯತೆಗಳೇ ಹೆಚ್ಚಿವೆ. ಬಿಹಾರ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಜಾಕ್ಕೆ ವಿರೋಧ ಪಕ್ಷಗಳು ಪಟ್ಟು ಹಿಡಿಯಲು ನಿರ್ಧರಿಸಿವೆ.

950 ಕೋಟಿ ರೂಪಾಯಿಗಳ ಮೇವು ಹಗರಣದಲ್ಲಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಆಪಾದಿತರಾಗಿರುವುದರಿಂದ ಬಿಹಾರ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂದು ಒತ್ತಾಯಿಸಲು ಬಿಜೆಪಿಯ ನಾಯಕರು ಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರನ್ನು ಭೇಟಿಯಾಗಿ ನಿಲುವಳಿ ಸೂಚನೆಯನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT